ಚೀನಾ- ಬ್ರಿಟನ್ ಸುವರ್ಣಯುಗ ಮುಗಿದಿದೆ: ರಿಷಿ ಸುನಕ್

Update: 2022-11-29 18:24 GMT

 
ಲಂಡನ್, ನ.29: ಬ್ರಿಟನ್‌ನ ಹಿತಾಸಕ್ತಿ ಹಾಗೂ ಮೌಲ್ಯಗಳಿಗೆ ಚೀನಾದ ವ್ಯವಸ್ಥಿತ ಸವಾಲು ಹೆಚ್ಚು ತೀವ್ರಗೊಳ್ಳುತ್ತಿದ್ದು ಚೀನಾದೊಂದಿಗಿನ ಸಂಬಂಧಗಳ ಸುವರ್ಣಯುಗ ಮುಗಿದಿದೆ ಎಂದು ಬ್ರಿಟನ್ ಪ್ರಧಾನಿ ರಿಷಿ ಸುನಕ್(Rishi Sunak) ಮಂಗಳವಾರ ಹೇಳಿದ್ದಾರೆ.

ವ್ಯಾಪಾರವು ಸಾಮಾಜಿಕ ಮತ್ತು ರಾಜಕೀಯ ಸುಧಾರಣೆಗೆ ಕಾರಣವಾಗುತ್ತದೆ ಎಂಬ ನಿಷ್ಕಪಟ ಕಲ್ಪನೆಯೊಂದಿಗೆ ಆರಂಭಿಸಿದ್ದ ತಥಾಕಥಿತ ಸುವರ್ಣಯುಗ ಅಂತ್ಯಗೊಂಡಿದೆ ಎಂಬುದನ್ನು ಸ್ಪಷ್ಟಪಡಿಸುತ್ತೇನೆ ಎಂದು ಸುನಕ್‌ರನ್ನು ಉಲ್ಲೇಖಿಸಿ ‘ರಾಯ್ಟರ್ಸ್’ (Reuters)ವರದಿ ಮಾಡಿದೆ.

ಚೀನಾದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಬಿಬಿಸಿ ಪತ್ರಕರ್ತನನ್ನು ಥಳಿಸಿ ಬಂಧಿಸಿದ ಘಟನೆಯ ಬಳಿಕ ಚೀನಾ-ಬ್ರಿಟನ್ ನಡುವೆ ವಾಗ್ಯುದ್ದ ಮುಂದುವರಿದಿದೆ.

Similar News