ಹಿಮಗಡ್ಡೆಯಲ್ಲಿ ಹೂತಿದ್ದ 48,500 ಸಾವಿರ ವರ್ಷ ಹಿಂದಿನ ವೈರಸ್‌ಗೆ ಪುನರ್ಜನ್ಮ

Update: 2022-11-29 18:27 GMT

ಸೈಬೀರಿಯಾ, ನ.29: ಜಾಗತಿಕ ತಾಪಮಾನ ಹೆಚ್ಚುತ್ತಿದ್ದಂತೆಯೇ ಹಲವಾರು ಹಿಮನದಿಗಳು ಮತ್ತು ಪರ್ಮಫ್ರಾಸ್ಟ್ (ಹೆಪ್ಪುಗಟ್ಟಿದ ನೆಲ) ಗಳು ಕರಗಿ ಶತಮಾನಗಳಿಂದ ಹಿಮಾವೃತಗೊಂಡು ಹುದುಗಿಹೋಗಿದ್ದ ಸೂಕ್ಷ್ಮಜೀವಿಗಳನ್ನು ಬಿಡುಗಡೆಗೊಳಿಸುತ್ತದೆ. ಅದರಲ್ಲಿ ಒಂದಾದ, 48,500 ವರ್ಷಗಳಷ್ಟು ಹಿಂದಿನ ‘ಝೊಂಬಿ ವೈರಸ್’('Zombie Virus') ಇದೀಗ ಪತ್ತೆಯಾಗಿದೆ.

  ಝೊಂಬಿ (Zombie)(ಜಡಸ್ಥಿತಿಯಲ್ಲಿ ಇದ್ದ) ವೈರಸ್ ಹಿಮಸರೋವರದ ಅಡಿಯಲ್ಲಿ ಪತ್ತೆಯಾಗಿದ್ದು ಇದಕ್ಕೆ ವಿಜ್ಞಾನಿಗಳು ಮರುಜೀವ ನೀಡಿದ್ದಾರೆ. ಒಟ್ಟು 13 ರೋಗಕಾರಕಗಳನ್ನು ಪುನರುಜ್ಜೀವನಗೊಳಿಸಲಾಗಿದೆ ಎಂದು ‘ಸೈಯನ್ಸ್ ಅಲರ್ಟ್’ ('Science Alert')ಪತ್ರಿಕೆ ವರದಿ ಮಾಡಿದೆ. ಇದರ ಗಾತ್ರ ಮತ್ತು ಇದು ಪತ್ತೆಯಾದ ಸ್ಥಳದ ಪರ್ಮಫ್ರಾಸ್ಟ್ ಮಣ್ಣಿನ ಆಧಾರದಲ್ಲಿ ಇದಕ್ಕೆ ‘ಪಂಡೋರವೈರಸ್ ಯೆಡೋಮ’ ಎಂದು ಹೆಸರಿಡಲಾಗಿದೆ.

 ಹೆಚ್ಚುತ್ತಿರುವ ಜಾಗತಿಕ ತಾಪಮಾನವು ಮಂಜುಗಡ್ಡೆಗಳು ಕರಗುವ ವೇಗವನ್ನು ಹೆಚ್ಚಿಸಿರುವುದರಿಂದ ಹೆಚ್ಚು ಹೆಚ್ಚು ಬ್ಯಾಕ್ಟೀರಿಯಾಗಳು ಬಿಡುಗಡೆಯಾಗುತ್ತಿವೆ. ಈ ಬ್ಯಾಕ್ಟೀರಿಯಾಗಳು ಅಪಾಯಕಾರಿ ರೋಗಕಾರಕಗಳನ್ನು ಒಳಗೊಂಡಿರಬಹುದು ಎಂದು ವಿಜ್ಞಾನಿಗಳು ಹೇಳುತ್ತಿದ್ದಾರೆ.

Similar News