ಮೌನಾ ಲೋವ ಜ್ವಾಲಾಮುಖಿ 39 ವರ್ಷದ ಬಳಿಕ ಸ್ಫೋಟ

Update: 2022-11-29 18:30 GMT

  ನ್ಯೂಯಾರ್ಕ್, ನ.29: ಅಮೆರಿಕ(America)ದ ಹವಾಯೀ ದ್ವೀಪದಲ್ಲಿರುವ ವಿಶ್ವದ ಅತೀ ದೊಡ್ಡ ಸಕ್ರಿಯ ಜ್ವಾಲಾಮುಖಿ ಮೌನಾ ಲೋವ 1984ರ ಬಳಿಕ ಇದೇ ಮೊದಲ ಬಾರಿಗೆ ರವಿವಾರ ಸ್ಫೋಟಗೊಂಡಿದ್ದು ಲಾವಾವನ್ನು ಉಗುಳುತ್ತಿದೆ ಎಂದು ವರದಿಯಾಗಿದೆ.

ಪೆಸಿಫಿಕ್ ಮಹಾಸಾಗರದ ಮಧ್ಯದಲ್ಲಿರುವ ಹವಾಯೀ ದ್ವೀಪ ಅಮೆರಿಕಕ್ಕೆ ಸೇರಿದ ಪ್ರದೇಶವಾಗಿದೆ. ಜ್ವಾಲಾಮುಖಿಯಿಂದ ಬಿಸಿಯಾದ ಲಾವಾ ಹೊರಹಾರುತ್ತಿದ್ದಂತೆಯೇ ಸುತ್ತಮುತ್ತಲಿನ ಪ್ರದೇಶ ಕಡುಕೆಂಪು ಬಣ್ಣಕ್ಕೆ ತಿರುಗಿದೆ. ಈಗ ಜ್ವಾಲಾಮುಖಿಯ ಶೃಂಗಭಾಗಕ್ಕೆ ಮಾತ್ರ ಲಾವಾ ಸೀಮಿತವಾಗಿರುವುದರಿಂದ ಜನತೆ ಆತಂಕ ಪಡುವ ಅಗತ್ಯವಿಲ್ಲ ಎಂದು ಅಧಿಕಾರಿಗಳನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ.

Similar News