ಅಮೆರಿಕ: ಸಲಿಂಗ ವಿವಾಹ ಮಾನ್ಯತೆ ರಕ್ಷಿಸುವ ಮಸೂದೆ ಅಂಗೀಕಾರ

Update: 2022-11-30 18:03 GMT

ವಾಷಿಂಗ್ಟನ್: ಸಲಿಂಗ ವಿವಾಹದ ಮಾನ್ಯತೆಯನ್ನು ರಕ್ಷಿಸುವ ಮಸೂದೆಯನ್ನು ಅಮೆರಿಕದ ಸೆನೆಟ್ ಮಂಗಳವಾರ ಅಂಗೀಕರಿಸಿದೆ ಎಂದು ರಾಯ್ಟರ್ಸ್ ವರದಿ ಮಾಡಿದೆ.

49 ಡೆಮೊಕ್ರಾಟ್ ಹಾಗೂ 12 ರಿಪಬ್ಲಿಕನ್ ಸದಸ್ಯರು ಮಸೂದೆಯ ಪರ, 36 ಸದಸ್ಯರು ವಿರುದ್ಧ ಮತ ಚಲಾಯಿಸಿದರು. 2015ರಲ್ಲಿ ಅಮೆರಿಕಾದ್ಯಂತ ಸಲಿಂಗವಿವಾಹಕ್ಕೆ  ಕಾನೂನು ಮಾನ್ಯತೆ ನೀಡಲಾಗಿದ್ದು ಇದನ್ನು  ಸುಪ್ರೀಂಕೋರ್ಟ್ ರದ್ದುಗೊಳಿಸಬಹುದು ಎಂಬ ಆತಂಕದ ಹಿನ್ನೆಲೆಯಲ್ಲಿ ಮಸೂದೆಯನ್ನು ಅಂಗೀಕರಿಸಲಾಗಿದೆ. `ಮದುವೆಗೆ ಗೌರವ' ಎಂಬ ಪ್ರಸ್ತಾವಿತ ಕಾಯ್ದೆಯ ಪ್ರಕಾರ, ಸಲಿಂಗ ವಿವಾಹ ನಡೆದಾಗ ಅದಕ್ಕೆ ಎಲ್ಲಾ ಫೆಡರಲ್ ಸರಕಾರಗಳು ಹಾಗೂ ರಾಜ್ಯಗಳು ಮಾನ್ಯತೆ ನೀಡಬೇಕು.

ಕಾಯ್ದೆಯನ್ನು ಉಭಯಪಕ್ಷೀಯ ಸೆನೆಟ್ ಅಂಗೀಕರಿಸಿರುವುದು `ಪ್ರೀತಿ ಎಂದರೆ ಪ್ರೀತಿ' ಎಂಬ ಮೂಲಭೂತ ಸತ್ಯವನ್ನು ನಮ್ಮ ರಾಷ್ಟ್ರ ಪುನರುಚ್ಚರಿಸುವ ಅಂಚಿನಲ್ಲಿದೆ ಎಂಬುದನ್ನು ಸೂಚಿಸಿದೆ. ಸದನ ಇದನ್ನು ಅನುಮೋದಿಸಿ ನನ್ನ ಮೇಜಿಗೆ ಕಳುಹಿಸಿದರೆ ಅದಕ್ಕೆ ಸಹಿ ಹಾಕಲು ನಾನು ಕಾಯುತ್ತಿದ್ದೇನೆ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ಟ್ವೀಟ್ ಮಾಡಿದ್ದಾರೆ.

Similar News