ನನ್ನನ್ನು ಅವಮಾನಿಸಲು ಕಾಂಗ್ರೆಸ್ ನಲ್ಲಿ ಪೈಪೋಟಿ ಏರ್ಪಟ್ಟಿದೆ: ಪ್ರಧಾನಿ ನರೇಂದ್ರ ಮೋದಿ

Update: 2022-12-01 11:09 GMT

ಅಹಮದಾಬಾದ್: ತನ್ನನ್ನು  ಗುರಿಯಾಗಿಸಿಕೊಂಡು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ "ರಾವಣ" ಹೇಳಿಕೆ ನೀಡಿರುವುದಕ್ಕೆ ಪ್ರಧಾನಿ ನರೇಂದ್ರ ಮೋದಿ ಇಂದು ಕಿಡಿಕಾರಿದರು.

"ನನ್ನನ್ನು ಯಾರು ಹೆಚ್ಚು ಅವಮಾನಿಸುತ್ತಾರೆ,  ನನ್ನ ವಿರುದ್ಧ ತೀಕ್ಷ್ಣವಾದ ಪದ ಬಳಸುತ್ತಾರೆ ಎಂಬ ಬಗ್ಗೆ ಕಾಂಗ್ರೆಸ್‌ನಲ್ಲಿ ಪೈಪೋಟಿ ಇದೆ’’ ಎಂದು ಗುಜರಾತ್‌ನ ಕಲೋಲ್‌ನಲ್ಲಿ ಚುನಾವಣಾ ಪ್ರಚಾರ ಮಾಡುವಾಗ ಪ್ರಧಾನಿ ಮೋದಿ ಹೇಳಿದರು.

"ಕೆಲವು ದಿನಗಳ ಹಿಂದೆ, ಕಾಂಗ್ರೆಸ್ ನಾಯಕರೊಬ್ಬರು  ಮೋದಿ ಹಿಟ್ಲರ್ ಸಾಯುತ್ತಾರೆ ಎಂದು ಹೇಳಿದರು, ಇನ್ನೊಬ್ಬರು ನನಗೆ ಅವಕಾಶ ಸಿಕ್ಕರೆ, ಮೋದಿಯನ್ನು ನಾನೇ ಕೊಲ್ಲುತ್ತೇನೆ ಎಂದು ಹೇಳಿದರು ... ಯಾರೋ ರಾವಣ ಎಂದು ಹೇಳುತ್ತಾರೆ, ಯಾರೋ ರಾಕ್ಷಸ ನೆಂದು ಹೇಳುತ್ತಾರೆ, ಯಾರೋ ಜಿರಳೆ ಎಂದು ಹೇಳುತ್ತಾರೆ’’ ಎಂದು  ಮೋದಿ ಹೇಳಿದರು.

ಈ ವಾರದ ಆರಂಭದಲ್ಲಿ ಅಹಮದಾಬಾದ್‌ನಲ್ಲಿ ನಡೆದ ರ್ಯಾಲಿಯನ್ನು ಉದ್ದೇಶಿಸಿ  ಮಾತನಾಡಿದ  ಖರ್ಗೆಯವರು "ಮೋದಿ ಜೀ ಪ್ರಧಾನಿಯಾಗಿದ್ದಾರೆ, ಅವರು ತಮ್ಮ ಕೆಲಸವನ್ನು ಮರೆತು, ಅವರು ಕಾರ್ಪೊರೇಷನ್ ಚುನಾವಣೆಗಳಲ್ಲಿ, ಎಂಎಲ್ಎ ಚುನಾವಣೆಗಳಲ್ಲಿ, ಎಂಪಿ ಚುನಾವಣೆಗಳಲ್ಲಿ, ಎಲ್ಲೆಡೆ ಪ್ರಚಾರ ಮಾಡುತ್ತಿರುತ್ತಾರೆ ... 'ನೀವು ಬೇರೆಯವರತ್ತ ನೋಡಬೇಕಾಗಿಲ್ಲ, ನನ್ನನ್ನು ನೋಡಿ. ಮತ ಚಲಾಯಿಸಿ' ಎಂದು ಅವರು ಹೇಳುತ್ತಾರೆ.  ನಾವು ನಿಮ್ಮ ಮುಖವನ್ನು ಎಷ್ಟು ಬಾರಿ ನೋಡಲಿ? ನಿಮಗೆ ಎಷ್ಟು ರೂಪಗಳಿವೆ? ನಿಮಗೆ ರಾವಣನಂತೆ 100 ತಲೆಗಳಿವೆಯೇ?" ಎಂದು ಪ್ರಶ್ನಿಸಿದ್ದರು.

Similar News