ಅಪರಾಧಿಗಳನ್ನು ಬಿಡುಗಡೆ ಮಾಡುವ ಬಗ್ಗೆ ನಿರ್ಧರಿಸುವ ಅಧಿಕಾರ ಗುಜರಾತ್ ಸರಕಾರಕ್ಕೆ ಇಲ್ಲ: ಬಿಲ್ಕಿಸ್ ಬಾನು

Update: 2022-12-01 10:44 GMT

ಹೊಸದಿಲ್ಲಿ: ಅಪರಾಧಿಗಳನ್ನು ಬಿಡುಗಡೆ ಮಾಡುವ ಬಗ್ಗೆ ನಿರ್ಧರಿಸಲು ಗುಜರಾತ್‌ ನಲ್ಲಿ  “ಸೂಕ್ತ ಸರಕಾರ” ಇದೆ ಎಂಬ ಸುಪ್ರೀಂಕೋರ್ಟ್‌ನ ಅಭಿಪ್ರಾಯವು ಅಪರಾಧ ಪ್ರಕ್ರಿಯಾ ಸಂಹಿತೆಯ ನಿಬಂಧನೆಗಳಿಗೆ ವಿರುದ್ಧವಾಗಿದೆ ಎಂದು ಬಿಲ್ಕಿಸ್ ಬಾನು Bilkis Bano  ಹೇಳಿದ್ದಾರೆ ಎಂದು ಗುರುವಾರ ‘Live Law’ ವರದಿ ಮಾಡಿದೆ.

ಸೆಕ್ಷನ್ 432(7)(ಬಿ) ಅನ್ನು ಬಾನು ಉಲ್ಲೇಖಿಸಿದ್ದು, ಇದು  ಅಪರಾಧಿಗೆ ಶಿಕ್ಷೆ ವಿಧಿಸುವ ರಾಜ್ಯದ ಸರಕಾರವು ಅವಧಿಪೂರ್ವ ಬಿಡುಗಡೆಯನ್ನು ಪರಿಗಣಿಸಬೇಕು ಎಂದು ಅದು ಹೇಳುತ್ತದೆ. ಮಹಾರಾಷ್ಟ್ರದ ನ್ಯಾಯಾಲಯವು ಅಪರಾಧಿಗಳಿಗೆ ಶಿಕ್ಷೆ ವಿಧಿಸಿದೆ.

ಅಪರಾಧಿಗಳ ಜೀವಾವಧಿ ಶಿಕ್ಷೆಯನ್ನು ಹಿಂತೆಗೆದುಕೊಳ್ಳುವ ಬಗ್ಗೆ ನಿರ್ಧರಿಸಲು ಗುಜರಾತ್ ಸರಕಾರಕ್ಕೆ ಅವಕಾಶ ನೀಡಿ ಮೇ ತಿಂಗಳಲ್ಲಿ ಸುಪ್ರೀಂ ಕೋರ್ಟ್ ನೀಡಿದ್ದ ತೀರ್ಪಿನ ವಿರುದ್ಧ ಬುಧವಾರ ಸಲ್ಲಿಸಿದ ಮರುಪರಿಶೀಲನಾ ಅರ್ಜಿಯಲ್ಲಿ ಬಾನು ಈ ಹೇಳಿಕೆ ನೀಡಿದ್ದಾರೆ. ಅಪರಾಧಿಗಳ ಅವಧಿಪೂರ್ವ ಬಿಡುಗಡೆಗೂ ಅವರು ಸವಾಲು ಹಾಕಿದ್ದಾರೆ.

Similar News