ಡಿ.2ರಂದು ಮಂಗಳೂರು ಪುರಭವನದಲ್ಲಿ ವಿದ್ಯಾರ್ಥಿ ನಿಧಿ ವಿತರಣೆ

Update: 2022-12-01 10:55 GMT

ಮಂಗಳೂರು, ಡಿ.1: ಶ್ರೀ ರಾಮ್ ಟ್ರಾನ್ಸ್‌ಪೋರ್ಟ್ ಫೈನಾನ್ಸ್ ಕಂಪೆನಿ ಲಿಮಿಟೆಡ್ ಇದರ ವತಿಯಿಂದ ವಿದ್ಯಾರ್ಥಿ ನಿಧಿ ವಿತರಣಾ ಕಾರ್ಯಕ್ರಮ ಡಿ.2ರಂದು ಪೂರ್ವಾಹ್ನ 10ಗಂಟೆಗೆ ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ನಡೆಯಲಿದೆ ಎಂದು ಕಂಪೆನಿಯ ವಲಯ ಮುಖ್ಯಸ್ಥ(ಬ್ಯುಸಿನೆಸ್) ಶರಚ್ಚಂದ್ರ ಭಟ್ ಕಾಕುಂಜೆ ತಿಳಿಸಿದ್ದಾರೆ.

ಗುರುವಾರ ಸುದ್ದಿಗೋಷ್ಠಿಯಲ್ಲಿ ಕಾರ್ಯಕ್ರಮದ ವಿವರ ನೀಡಿದ ಅವರು, ದ.ಕ.ಜಿಲ್ಲಾ ಉಸ್ತುವಾರಿ ಸಚಿವ ವಿ.ಸುನಿಲ್ ಕುಮಾರ್ ವಿದ್ಯಾರ್ಥಿ ನಿಧಿ ವಿತರಣೆ ಮಾಡುವರು. ಎಸ್‌ಟಿಎಫ್ಸಿ ಜಂಟಿ ಆಡಳಿತ ನಿರ್ದೇಶಕ ಸುದರ್ಶನ ಬಿ ಹೊಳ್ಳ ಕಾರ್ಯಕ್ರಮ ಉದ್ಘಾಟಿಸುವರು ಎಂದರು.

ದ.ಕ. ಜಿಲ್ಲೆಯ ಸಾರಿಗೆ ಉದ್ಯಮ ಕ್ಷೇತ್ರಕ್ಕೆ ಸಂಬಂಧಪಟ್ಟ ಕಾರ್ಮಿಕರ ಮತ್ತು ಮಾಲಕರ 8ನೆಯ ತರಗತಿಯಿಂದ ಪಿಯುಸಿವರೆಗಿನ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡಲಾಗುವುದು. ವಿದ್ಯಾರ್ಥಿಗಳು ಈ ಹಿಂದಿನ ಶೈಕ್ಷಣಿಕ ವರ್ಷದಲ್ಲಿ ಶೇ.60ಕ್ಕಿಂತ ಅಧಿಕ ಅಂಕಗಳನ್ನು ಪಡೆದಿರಬೇಕು. 8ರಿಂದ 10ನೆಯ ತರಗತಿವರೆಗಿನ ಮಕ್ಕಳಿಗೆ ತಲಾ ರೂ.3000 ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ತಲಾ ರೂ.3500 ವಿದ್ಯಾರ್ಥಿವೇತನ ನೀಡಲಾಗುವುದು. ಡಿಸೆಂಬರ್ ಅಂತ್ಯದೊಳಗೆ ದ.ಕ. ಜಿಲ್ಲೆಯ ಸುಮಾರು ರೂ.61,62,500 ವಿದ್ಯಾರ್ಥಿ ವೇತನ ನೀಡಲಾಗುವುದು. ಕಾರ್ಯಕ್ರಮದಲ್ಲಿ 835 ವಿದ್ಯಾರ್ಥಿಗಳಿಗೆ ರೂ.26,74,500 ವಿದ್ಯಾರ್ಥಿವೇತನ ವಿತರಿಸಲಾಗುವುದು ಎಂದು ಶರಚ್ಚಂದ್ರ ಭಟ್ ವಿವರ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಎಸ್‌ಟಿಎ್ಸಿ ಪ್ರಮುಖರಾದ ನಾಗರಾಜ್ ಬಿ., ಚೇತನ್ ಅರಸ್, ಚಂದ್ರಹಾಸ ಆಳ್ವ, ಪ್ರಮೋದ್ ಕುಮಾರ್ ಉಪಸ್ಥಿತರಿದ್ದರು.

Similar News