ಇಂದಿನಿಂದ ದಿಲ್ಲಿ, ಬೆಂಗಳೂರು, ವಾರಣಾಸಿ ಏರ್ಪೋರ್ಟ್‍ಗಳಲ್ಲಿ 'ಫೇಶಿಯಲ್ ರೆಕಗ್ನಿಶನ್' ತಂತ್ರಜ್ಞಾನ ಬಳಕೆ

Update: 2022-12-01 11:48 GMT

ಹೊಸದಿಲ್ಲಿ: ತಡೆರಹಿತ ಮತ್ತು ಸಮಸ್ಯೆ-ರಹಿತ ವಿಮಾನಯಾನ ಅನುಭವಕ್ಕಾಗಿ ಭಾರತ ಇಂದಿನಿಂದ ಡಿಜಿ ಯಾತ್ರ (Digi Yatra) ಎಂಬ ವ್ಯವಸ್ಥೆಯನ್ನು ಜಾರಿಗೊಳಿಸಲಾಗಿದೆ. ಫೇಶಿಯಲ್ ರೆಕಗ್ನಿಷನ್ ತಂತ್ರಜ್ಞಾನದ (Facial Recognition Technology) ಆಧಾರದಲ್ಲಿ ಈ ವ್ಯವಸ್ಥೆ ಕಲ್ಪಿಸಲಾಗಿದೆ.

ಮೊದಲ ಹಂತದಲ್ಲಿ ದಿಲ್ಲಿ, ಬೆಂಗಳೂರು ಮತ್ತು ವಾರಣಾಸಿ ವಿಮಾನ ನಿಲ್ದಾಣಗಳಲ್ಲಿ ಈ ಸೌಲಭ್ಯವಿದ್ದರೆ ನಂತರ ಹೈದರಾಬಾದ್, ಕೊಲ್ಕತ್ತಾ, ಪುಣೆ ಮತ್ತು ವಿಜಯವಾಡ ವಿಮಾನ ನಿಲ್ದಾಣಗಳಿಗೆ ಮಾರ್ಚ್ 2023ರ ವೇಳೆಗೆ ವಿಸ್ತರಿಸಲಾಗುವುದು. ಕ್ರಮೇಣ ಈ ಸೌಲಭ್ಯವನ್ನು ದೇಶದ ಎಲ್ಲಾ ವಿಮಾನ ನಿಲ್ದಾಣಗಳಲ್ಲಿ ಒದಗಿಸಲಾಗುವುದು.

ಈ ಸೌಲಭ್ಯ ಬಳಸಲು ಪ್ರಯಾಣಿಕರು ಆಧಾರ್ ಆಧರಿತ ದೃಢೀಕರಣ ಮತ್ತು ಸ್ವಯಂ-ಚಿತ್ರ ಸೆರೆಹಿಡಿಯುವಿಕೆ ಮೂಲಕ ಡಿಜಿ ಯಾತ್ರ ಆ್ಯಪ್ ನಲ್ಲಿ ಒಂದು ಬಾರಿ ನೋಂದಣಿ ಮಾಡಿಕೊಳ್ಳಬೇಕು.

ಯಾವುದೇ ವೈಯಕ್ತಿಕವಾಗಿ ಗುರುತಿಸಬಹುದಾದ ಮಾಹಿತಿ (ಪರ್ಸನಲ್ಲಿ ಐಡೆಂಟಿಫೈಯೇಬಲ್ ಇನ್ಫಾರ್ಮೇಶನ್) ಇದರ ಕೇಂದ್ರೀಯ ಸಂಗ್ರಹಣೆ ಇರುವುದಿಲ್ಲ. ಪ್ರಯಾಣಿಕರ ಐಡಿ ಮತ್ತು ಪ್ರಯಾಣ ಸಂಬಂಧಿತ ರುಜುವಾತುಗಳನ್ನು ಪ್ರಯಾಣಿಕರ ಸ್ಮಾರ್ಟ್ ಫೋನ್‍ನಲ್ಲಿರುವ ಭದ್ರ ವ್ಯಾಲೆಟ್‍ನಲ್ಲಿ ಸಂಗ್ರಹಿಸಲಾಗುವುದು.

Similar News