ನನ್ನ ಹೇಳಿಕೆಯ ಬಗ್ಗೆ ಸ್ಪಷ್ಟತೆಯಿದೆ, ಕಾಶ್ಮೀರಿ ಪಂಡಿತರ ನೋವನ್ನು ಅವಮಾನಿಸಿಲ್ಲ: ನಡಾವ್‌ ಲಪಿಡ್‌

"'ದಿ ಕಾಶ್ಮೀರ್ ಫೈಲ್ಸ್' ಕುರಿತು ಇಸ್ರೇಲಿ ರಾಜತಾಂತ್ರಿಕನ ಪ್ರತಿಕ್ರಿಯೆಗೆ ನಾಚಿಕೆಯಾಗುತ್ತಿದೆ"

Update: 2022-12-01 15:18 GMT

ಹೊಸದಿಲ್ಲಿ: ಕಾಶ್ಮೀರಿ ಪಂಡಿತ್ ಸಮುದಾಯ ಅಥವಾ ನೋವನ್ನು ಅನುಭವಿಸಿದವರನ್ನು ಅವಮಾನಿಸುವುದು ನನ್ನ ಉದ್ದೇಶವಲ್ಲ. ʼದಿ ಕಾಶ್ಮೀರ್ ಫೈಲ್ಸ್ʼ (Kashmir Files) ಕುರಿತಾದ ತನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಿಕೊಂಡಿದ್ದರೆ ವಿಷಾದಿಸುತ್ತೇನೆ ಎಂದು ಇಸ್ರೇಲಿ ಚಲನಚಿತ್ರ ನಿರ್ದೇಶಕ ನಡಾವ್ ಲಪಿಡ್ (Nadav Lapid) ಹೇಳಿದ್ದಾರೆ.

ಇತ್ತೀಚಿನ ಇಂಟರ್ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ಆಫ್ ಇಂಡಿಯಾ (IFFI) ನಲ್ಲಿ ಅಂತರರಾಷ್ಟ್ರೀಯ ತೀರ್ಪುಗಾರರ ಅಧ್ಯಕ್ಷರಾಗಿದ್ದ ಲಪಿಡ್ ಅವರು, ವಿವೇಕ್ ಅಗ್ನಿಹೋತ್ರಿ ಚಲನಚಿತ್ರವನ್ನು "ಕೊಳಕು" ಮತ್ತು "ಅಜೆಂಡಾ" ಎಂದು ಹೇಳಿರುವುದು ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಬಲಪಂಥೀಯರ ತೀವ್ರ ವಿರೋಧದ ಬಳಿಕ ಇಸ್ರೇಲ್‌ ರಾಜತಾಂತ್ರಿಕರು ಕೂಡಾ ನಿರ್ದೇಶಕನ ಟೀಕೆಗಳನ್ನು ಖಂಡಿಸಿದ್ದರು. ಭಾರತದ ಆತಿಥ್ಯವನ್ನು ಲಪಿಡ್‌ ಅವಹೇಳಿಸಿದ್ದಾರೆಂದು ಇಸ್ರೇಲ್‌ ರಾಜತಾಂತ್ರಿಕರು ಹೇಳಿದ್ದರು. 

ಈ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿದ ಲಪಿಡ್‌ “ನಾನು ಇಸ್ರೇಲಿ ರಾಜತಾಂತ್ರಿಕನ ಈ ಪ್ರತಿಕ್ರಿಯೆಯ ಕುರಿತು ನಾಚಿಕೆಪಡುತ್ತೇನೆ” ಎಂದು ಹೇಳಿದ್ದಾರೆ. 
ಅಲ್ಲದೆ, ತಾನು ಸಾವಿರಾರು ಬೆದರಿಕೆ ಸಂದೇಶಗಳನ್ನು ಸ್ವೀಕರಿಸಿರುವುದಾಗಿ ಬಹಿರಂಗಪಡಿಸಿದ್ದಾರೆ ಎಂದು thewire.in ವರದಿ ಮಾಡಿದೆ.

ಇತ್ತೀಚಿನ ಇಂಟರ್ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ಆಫ್ ಇಂಡಿಯಾ (IFFI) ನಲ್ಲಿ ಅಂತರರಾಷ್ಟ್ರೀಯ ತೀರ್ಪುಗಾರರ ಅಧ್ಯಕ್ಷರಾಗಿದ್ದ ಲಪಿಡ್ ಅವರು, ವಿವೇಕ್ ಅಗ್ನಿಹೋತ್ರಿ ಚಲನಚಿತ್ರವನ್ನು "ಕೊಳಕು" ಮತ್ತು "ಅಜೆಂಡಾ" ಎಂದು ಹೇಳಿರುವುದು ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಬಲಪಂಥೀಯರ ತೀವ್ರ ವಿರೋಧದ ಬಳಿಕ ಇಸ್ರೇಲ್‌ ರಾಜತಾಂತ್ರಿಕರು ಕೂಡಾ ನಿರ್ದೇಶಕನ ಟೀಕೆಗಳನ್ನು ಖಂಡಿಸಿದ್ದರು. ತಮ್ಮ ಹೇಳಿಕೆಯ ಕುರಿತು ಸ್ಪಷ್ಟೀಕರಣ ಕೊಟ್ಟ ಲಪಿಡ್‌, ತನ್ನ ಹೇಳಿಕೆ ಚಲನಚಿತ್ರದ ಸರಣಿ ಕುರಿತು ಮಾತ್ರ. ಕಾಶ್ಮೀರಿ ಪಂಡಿತರ ಬಗ್ಗೆ ಎಂದು ತನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಿಕೊಂಡಿದ್ದರೆ ಅದಕ್ಕೆ ವಿಷಾದಿಸುತ್ತೇನೆ ಎಂದು ಅವರು ಹೇಳಿರುವುದಾಗಿ ವರದಿಯಾಗಿದೆ. 

"ನಾನು ಯಾರನ್ನೂ ಅವಮಾನಿಸಲು ಬಯಸಲಿಲ್ಲ. ನನ್ನ ಗುರಿ ಎಂದಿಗೂ ಸಂತ್ರಸ್ತ ಜನರು ಅಥವಾ ಅವರ ಸಂಬಂಧಿಕರನ್ನು ಅವಮಾನಿಸುವುದಾಗಿರಲಿಲ್ಲ, ಅವರು ಅದನ್ನು ಅರ್ಥೈಸಿದ ರೀತಿಯಲ್ಲಿ ನಾನು ವಿಷಾದಿಸುತ್ತೇನೆ," ಎಂದು ಲ್ಯಾಪಿಡ್‌ ಹೇಳಿದ್ದಾರೆ. .

“ನಾನು ಚಿತ್ರದ ಬಗ್ಗೆ ಏನು ಹೇಳಿದ್ದೇನೆಯೋ, ಅದರ ಬಗ್ಗೆ ಸ್ಪಷ್ಟವಾಗಿದ್ದೇನೆ. ನನಗೆ ಮತ್ತು ನನ್ನ ಸಹ ಜ್ಯೂರಿ ಸದಸ್ಯರಿಗೆ ಕೂಡಾ, ಇದು ಒಂದು ಅಸಭ್ಯ ಅಜೆಂಡಾದ ಚಲನಚಿತ್ರವಾಗಿದೆ ಮತ್ತುಈ ಚಿತ್ರವು ಅಂತಹ ಪ್ರತಿಷ್ಠಿತ ಸ್ಪರ್ಧಾತ್ಮಕ ವಿಭಾಗಕ್ಕೆ ಸೂಕ್ತವಲ್ಲ ಎಂದು ಅನಿಸಿದೆ. ನಾನು ಅದನ್ನು ಮತ್ತೆ ಮತ್ತೆ ಪುರುಚ್ಛಿಸುತ್ತೇನೆ,” ಎಂದು ಅವರು ಹೇಳಿದ್ದಾರೆ.

"ದುರಂತದ ಸಂತ್ರಸ್ತರು, ಅದರ ಬಲಿಪಶುಗಳು, ಮತ್ತು ಅಲ್ಲಿ ಬಳಲುತ್ತಿರುವವರ ಬಗ್ಗೆ ನನಗೆ ಅಪಾರ ಗೌರವವಿದೆ. ಇದು (ನನ್ನ ಹೇಳಿಕೆಗಳು) ಅವರ ಬಗ್ಗೆ ಅಲ್ಲ. ನಾನು ಈ ಮಾತುಗಳನ್ನು 10,000 ಬಾರಿ ಪುನರಾವರ್ತಿಸುತ್ತೇನೆ. ರಾಜಕೀಯ ಸಮಸ್ಯೆ, ಐತಿಹಾಸಿಕ ಸಮೀಕರಣ ಅಥವಾ ಕಾಶ್ಮೀರದಲ್ಲಿ ಸಂಭವಿಸಿದ ದುರಂತವನ್ನು ಅಗೌರವಗೊಳಿಸುವುದು ನನ್ನ ಉದ್ದೇಶವಾಗಿರಲಿಲ್ಲ. ನಾನು ಚಲನಚಿತ್ರದ ಬಗ್ಗೆ ಮಾತನಾಡುತ್ತಿದ್ದೆ" ಎಂದು ಅವರು ಹೇಳಿದರು.

 ಅದೇ ವೇಳೆ, ಇಸ್ರೇಲಿ ನಿರ್ದೇಶಕರ ಅಭಿಪ್ರಾಯ "ವೈಯಕ್ತಿಕ ಅಭಿಪ್ರಾಯ" ಎಂದು ಹೇಳಿದ್ದ ಐಎಫ್‌ಎಫ್‌ಐ ಅಂತರಾಷ್ಟ್ರೀಯ ತೀರ್ಪುಗಾರರ ಸದಸ್ಯ ಸುದೀಪ್ತೋ ಸೇನ್ ನೀಡಿರುವ ಹೇಳಿಕೆಯನ್ನು ತಳ್ಳಿ ಹಾಕಿರುವ ಲಪಿಡ್‌, ಇದು ತನ್ನ ವೈಯಕ್ತಿಕ ಅಭಿಪ್ರಾಯವಲ್ಲ ಎಂದು ಪ್ರತಿಪಾದಿಸಿದ್ದಾರೆ.

 "ಚಿತ್ರವು ಕುಟಿಲತೆ, ಕೊಳಕು ಮತ್ತು ಹಿಂಸೆಯ ಸರಣಿಯನ್ನು ಬಳಸಿದೆ ಎಂದು ನಾವೆಲ್ಲರೂ (ತೀರ್ಪುಗಾರರು) ಭಾವಿಸಿದ್ದೇವೆ. ಏಕೆಂದರೆ ಅದು ವಾತಾವರಣದಲ್ಲಿ ಹಗೆತನ, ಹಿಂಸೆ ಮತ್ತು ದ್ವೇಷವನ್ನು ಉಂಟುಮಾಡುವ ಸಂದೇಶವನ್ನು ರವಾನಿಸುತ್ತದೆ" ಎಂದು ಅವರು ಹೇಳಿದ್ದಾರೆ.

ನಾನು ಕಾಶ್ಮೀರದಲ್ಲಿ ಹಿಂಸೆ ನಡೆದಿಲ್ಲ ಎಂದು ಹೇಳುತ್ತಿಲ್ಲ, ಆದರೆ ಅದನ್ನು ಚಿತ್ರದಲ್ಲಿ ತೋರಿಸಿರುವ ರೀತಿಗಷ್ಟೇ ನಮ್ಮ ಆಕ್ಷೇಪ ಇದೆ ಎಂದು ಲಪಿಡ್‌ ಹೇಳಿದ್ದಾರೆ.

ಇದನ್ನೂ ಓದಿ: ಭಾರತದಲ್ಲಿ ಪ್ರತಿ 15 ಸೆಕೆಂಡ್ ಗೊಂದು ಏರ್ ಕಂಡಿಷನರ್ ಗೆ ಬೇಡಿಕೆಯ ಸಾಧ್ಯತೆ!

Similar News