ತವರಿಗೆ ಮರಳಿದ ಇರಾನ್ ತಂಡಕ್ಕೆ ನೀರಸ ಸ್ವಾಗತ

Update: 2022-12-01 17:04 GMT

ಟೆಹರಾನ್,: ಫಿಫಾ ವಿಶ್ವಕಪ್ (FIFA World Cup)ನಲ್ಲಿ ಅಮೆರಿಕ ವಿರುದ್ಧ ಸೋತು ಮನೆಗೆ ಮರಳಿರುವ ಇರಾನ್ ನ ಫುಟ್ಬಾಲ್ ತಂಡಕ್ಕೆ ನೀರಸ ಸ್ವಾಗತ ಲಭಿಸಿದೆ. ಇರಾನ್ ನಲ್ಲಿ ನಡೆಯುತ್ತಿರುವ ಸರಕಾರಿ ವಿರೋಧಿ ಪ್ರತಿಭಟನೆಗಳ ಹಿನ್ನೆಲೆಯಲ್ಲಿ, ಅಮೆರಿಕ-ಇರಾನ್ ಪಂದ್ಯವು ಭಾರೀ ಮಹತ್ವ ಪಡೆದುಕೊಂಡಿತ್ತು.

ಅಮೆರಿಕದ ವಿರುದ್ಧ 0-1 ಅಂತರದಿಂದ ಸೋತ ಒಂದು ದಿನದ ಬಳಿಕ ಬುಧವಾರ ಇರಾನ್ ತಂಡವು ತವರಿಗೆ ಹಿಂದಿರುಗಿತು. ವಿಶ್ವಕಪ್ ನ ಆರಂಭಿಕ ಪಂದ್ಯದಲ್ಲಿ ಇರಾನ್ ಆಟಗಾರರು ಆಟಕ್ಕೆ ಮುನ್ನ ರಾಷ್ಟ್ರಗೀತೆಯನ್ನು ಹಾಡಿರಲಿಲ್ಲ. ಆದರೆ, ನಂತರದ ಪಂದ್ಯಗಳಲ್ಲಿ ಹಾಡಿತು.

ಟೆಹರಾನ್ ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕೆಲವು ಡಝನ್ ಅಭಿಮಾನಿಗಳು ತಂಡವನ್ನು ಸ್ವಾಗತಿಸಿದರು ಎಂದು ವರದಿಯಾಗಿದೆ.

Similar News