ಮುಂದಿನ ಚುನಾವಣೆಗೆ ಕಾರ್ಕಳದಿಂದಲೆ ಸ್ಪರ್ಧಿಸುತ್ತೇನೆ : ಸಚಿವ ಸುನೀಲ್ ಕುಮಾರ್

Update: 2022-12-01 17:37 GMT

ಕಾರ್ಕಳ:  ನಾನು ಮುಂದಿನ  ಚುನಾವಣೆಗೆ ಕಾರ್ಕಳದಿಂದಲೆ ಸ್ಪರ್ಧಿಸುತ್ತೇನೆ. ಕಾರ್ಕಳ ವಿಧಾನಸಭಾ ಕ್ಷೇತ್ರ ನನ್ನ ರಾಜಕೀಯ ದೀಕ್ಷೆ ನೀಡಿದ ಕ್ಷೇತ್ರ . ಇಲ್ಲಿಯೆ ನನ್ನ ಮರಣ, ಬೇರೆ ಕ್ಷೇತ್ರಕ್ಕೆ ಓಡಿಹೋಗಲ್ಲ ಎಂದು ಸಚಿವ ಸುನೀಲ್ ಕುಮಾರ್ ಹೇಳಿದರು.

ಅವರು ಗುರುವಾರ ಕಾರ್ಕಳ ಬಿಜೆಪಿ ಕಾರ್ಕಳ ವತಿಯಿಂದ ಮಂಜುನಾಥ್ ಪೈ ಸಭಾ ಭವನದಲ್ಲಿ  ನಡೆದ ಬೂತ್ ಮಟ್ಟದ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ಬಿಜೆಪಿಯ ಸರಕಾರದ ಸಾಧನೆಯನ್ನು ಬೂತ್ ಮಟ್ಟದ ಕಾರ್ಯಕರ್ತರು ಮನೆಮನೆಗೆ ತಲುಪಿಸುವಲ್ಲಿ ವಿಫಲರಾಗಿದ್ದಾರೆ. ಅದಕ್ಕಾಗಿ ಬೂತ್ ಮಟ್ಟದ ಕಾರ್ಯಕರ್ತರ ಸಭೆಯನ್ನು ಹಮ್ಮಿಕೊಳ್ಳಲಾಗಿದೆ. ಬಿಜೆಪಿ  ಅಧಿಕಾರಕ್ಕೆ ಬಂದ ಬಳಿಕ ಅನೇಕ ಅಭಿವೃದ್ಧಿ ಕಾರ್ಯಗಳು ನಡೆದಿವೆ. ಲವ್ ಜಿಹಾದ್  ವಿರುದ್ದ  ಕಾನೂನು , ಗೋಹತ್ಯೆ  ನಿಷೇಧ,  ಟಿಪ್ಪು ಜಯಂತಿ ಆಚರಣೆ ನಿಲ್ಲಿಸಿದ್ದು, ಹಿಜಾಬ್ ವಿರುದ್ಧ  ಗಟ್ಟಿ ಧ್ವನಿಯಾಗಿ ಸಮವಸ್ತ್ರ ಧರಿಸಲು ಕಾನೂನು ಜಾರಿಗೊಳಿಸಿದ್ದು ಇದೇ  ಬಿಜೆಪಿ ಸರಕಾರ, ದೇಶದಲ್ಲಿ ಬಿಜೆಪಿ ಪೂರ್ಣ ಪ್ರಮಾಣದ  ಅಧಿಕಾರಕ್ಕೆ ಬಂದ ಬಳಿಕವೆ ಕಾಶಿ ಕಾರಿಡಾರ್,ಉಜ್ಜೈನಿ ಕಾರಿಡಾರ್, ರಾಮಮಂದಿರ ನಿರ್ಮಾಣದಂತಹ  ಕೆಲಸಗಳು ನಡೆದಿವೆ. ಪಿಎಂ ಕಿಸಾನ್ ರೈತ ನಿಧಿ ಯೊಜನೆಗಳ ಮೂಲಕ  ಬಿಜೆಪಿ ರೈತರ ಪರವಾಗಿದೆ.  ಕಾರ್ಕಳ ತಾಲೂಕಿನಲ್ಲಿಯೆ  ಪಿ ಎಂ ಕಿಸಾನ್ ಯೋಜನೆ ಮೂಲಕ 36000 ಜನರಿಗೆ  ಕಿಸಾನ್ ಯೋಜನೆ ಪ್ರಯೋಜನ ಪಡೆಯುತಿದ್ದಾರೆ ಎಂದು ಸಚಿವರು ಹೇಳಿದರು

ಸಭೆಯಲ್ಲಿ ಬಿಜೆಪಿ ಕ್ಷೇತ್ರಾದ್ಯಕ್ಷ ಮಹಾವೀರ ಹೆಗ್ಡೆ, ರವೀಂದ್ರ ಶೆಟ್ಟಿ ಬಜಗೋಳಿ, ಬೋಳ ಪ್ರಭಾಕರ್ ಕಾಮತ್, ಎಂ.ಕೆ ವಿಜಯಕುಮಾರ್ ಮಾತನಾಡಿದರು. 

ಹೆಬ್ರಿ ಶಕ್ತಿ ಕೇಂದ್ರದ ಅಧ್ಯಕ್ಷ ರಮೇಶ್ ಶಿವಪುರ, ಸಾಣೂರು ಶಕ್ತಿ ಕೆಂದ್ರದ ಕರುಣಾಕರ್ ಕೋಟ್ಯಾನ್, ಪುರುಷೋತ್ತಮ್ ಮುಲ್ಲಡ್ಕ ,ರವೀಂದ್ರ ಮೂಳೂರು ಉಪಸ್ಥಿತರಿದ್ದರು.

ಮಾಳ ಗ್ರಾ.ಪಂ ಸದಸ್ಯ ಸಂಜೀವ ಮಾಳ ಸೇರಿದಂತೆ ವಿವಿಧ ಸದಸ್ಯರು ಬಿಜೆಪಿ ಪಕ್ಷ ಸೇರಿದರು. ಬಿಜೆಪಿ ನಗರ ಶಕ್ತಿ ಕೇಂದ್ರ ಅಧ್ಯಕ್ಷ  ರವೀಂದ್ರ ಮೊಯಿಲಿ ಸ್ವಾಗತಿಸಿದರು. ಸಾಣೂರು ನರಸಿಂಹ ಕಾಮತ್ ಕಾರ್ಯಕ್ರಮ ನಿರೂಪಿಸಿದರು.

Similar News