ಸಿರಿಯಾದಲ್ಲಿ ಮತ್ತೆ ದಾಳಿ ಬೇಡ: ಟರ್ಕಿಗೆ ಅಮೆರಿಕ ಎಚ್ಚರಿಕೆ

Update: 2022-12-01 17:42 GMT

ವಾಷಿಂಗ್ಟನ್, ಡಿ.1: ಸಿರಿಯಾದಲ್ಲಿ ಟರ್ಕಿ ಹೊಸದಾಗಿ ಆರಂಭಿಸಿರುವ ಮಿಲಿಟರಿ ಕಾರ್ಯಾಚರಣೆಗೆ ಅಮೆರಿಕದ ತೀವ್ರ ವಿರೋಧವಿದೆ ಎಂದು ಅಮೆರಿಕದ ರಕ್ಷಣಾ ಕಾರ್ಯದರ್ಶಿ ಲಾಯ್ಡ ಆಸ್ಟಿನ್ ಎಚ್ಚರಿಕೆ ನೀಡಿದ್ದಾರೆ.

ಇತ್ತೀಚಿನ ವೈಮಾನಿಕ ದಾಳಿಗಳು ಸೇರಿದಂತೆ ಉತ್ತರ ಸಿರಿಯಾ ಮತ್ತು ಟರ್ಕಿಯಲ್ಲಿ ಉದ್ವಿಗ್ನತೆಯ ಕೃತ್ಯಗಳು ಹೆಚ್ಚುತ್ತಿರುವ ಬಗ್ಗೆ ಆಸ್ಟಿನ್ ಆತಂಕ ವ್ಯಕ್ತಪಡಿಸಿದ್ದಾರೆ. ವೈಮಾನಿಕ ದಾಳಿಯು ಸಿರಿಯಾದಲ್ಲಿ ಸ್ಥಳೀಯ ಪಾಲುದಾರರೊಂದಿಗೆ ಸೇರಿ ಐಸಿಸ್ ಸಂಘಟನೆಯ ವಿರುದ್ಧ ಕೆಲಸ ಮಾಡುತ್ತಿರುವ ಅಮೆರಿಕನ್ ಸಿಬಂದಿಗಳ ಸುರಕ್ಷತೆಗೆ ನೇರ ಬೆದರಿಕೆಯಾಗಿದೆ ಎಂದು ಪೆಂಟಗಾನ್ ಹೇಳಿದೆ.

ಟರ್ಕಿಯ ಇಸ್ತಾನ್‌ಬುಲ್‌ನಲ್ಲಿ ನವೆಂಬರ್ 13ರಂದು ನಡೆದ ದಾಳಿ ಪ್ರಕರಣವನ್ನೂ ಲಾಯ್ಡಾ ಆಸ್ಟಿನ್ ಖಂಡಿಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

Similar News