ವಿಶ್ವಸಂಸ್ಥೆ ಭದ್ರತಾ ಮಂಡಳಿ ಅಧ್ಯಕ್ಷತೆ ವಹಿಸಿಕೊಂಡ ಭಾರತ

Update: 2022-12-01 18:11 GMT

ವಿಶ್ವಸಂಸ್ಥೆ, ಡಿ.1: 15 ಸದಸ್ಯರ ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಡಿಸೆಂಬರ್ ತಿಂಗಳ ಅಧ್ಯಕ್ಷತೆಯನ್ನು ಗುರುವಾರ ಭಾರತಕ್ಕೆ ಧಿಕೃತವಾಗಿ ಹಸ್ತಾಂತರಿಸಲಾಗಿದೆ.

ವಿಶ್ವಸಂಸ್ಥೆಗೆ ಭಾರತದ ಕಾಯಂ ಪ್ರತಿನಿಧಿ ರುಚಿರಾ ಕಂಬೋಜ್ ಒಂದು ತಿಂಗಳ ಅವಧಿಗೆ ಈ ಪ್ರತಿಷ್ಟಿತ ಹುದ್ದೆಯಲ್ಲಿ ಕಾರ್ಯ ನಿರ್ವಹಿಸಲಿದ್ದಾರೆ. ಅಧ್ಯಕ್ಷ ಸ್ಥಾನ ವಹಿಸುವುದಕ್ಕೂ ಮುನ್ನ ಅವರು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಅಂಟೋನಿಯೊ ಗುಟೆರಸ್ ಮತ್ತು ವಿಶ್ವಸಂಸ್ಥೆ ಸಾಮಾನ್ಯ ಸಭೆಯ ಅಧ್ಯಕ್ಷ ಕಸಾಬ ಕೊರೋಸಿಯನ್ನು ಭೇಟಿಯಾಗಿದ್ದರು. 2021ರ ಆಗಸ್ಟ್‌ನಲ್ಲಿಯೂ ಭಾರತ ಅಧ್ಯಕ್ಷತೆ ವಹಿಸಿತ್ತು.

ಭಯೋತ್ಪಾದನೆ ಸಮಸ್ಯೆಯನ್ನು ಎದುರಿಸುವುದು ಹಾಗೂ ಬಹುಪಕ್ಷೀಯ ಸುಧಾರಣೆಗೆ ಈ ಅವಧಿಯಲ್ಲಿ ಆದ್ಯತೆ ನೀಡಲಾಗುವುದು ಎಂದು ಭಾರತದ ಅಧಿಕಾರಿಗಳು ಹೇಳಿದ್ದಾರೆ. ಈ ವರ್ಷದ ಡಿಸೆಂಬರ್ ಅಂತ್ಯಕ್ಕೆ ವಿಶ್ವಸಂಸ್ಥೆಯ ಕಾಯಂ ಅಲ್ಲದ 2 ವರ್ಷದ ಸದಸ್ಯತ್ವ ಮುಕ್ತಾಯಗೊಳ್ಳಲಿದೆ.

Similar News