‘ರೆಸೋನೆನ್ಸ್’ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನ ಉದ್ಘಾಟನೆ
Update: 2022-12-02 18:38 IST
ಉಡುಪಿ: ಉಡುಪಿ ಜಂಗಮ ಮಠದ ವಿಭೂತಿ ಆರ್ಟ್ ಗ್ಯಾಲರಿ ಯಲ್ಲಿ ನಾಲ್ಕು ದಿನಗಳ ಕಾಲ ಹಮ್ಮಿಕೊಳ್ಳಲಾಗಿ ರುವ ಚಿತ್ರಕಲಾವಿದ ಹರೀಶ್ ನಾಯ್ಕ್ ಉಡುಪಿ ಇವರ ‘ರೆಸೋನೆನ್ಸ್’ ಚಿತ್ರಕಲಾ ಪ್ರದರ್ಶನವು ಶುಕ್ರವಾರ ಉದ್ಘಾಟನೆಗೊಂಡಿತು.
ಪ್ರದರ್ಶನವನ್ನು ದೊಡ್ಡಣಗುಡ್ಡೆ ಶ್ರೀದುರ್ಗಾ ಆದಿಶಕ್ತಿ ದೇವಸ್ಥಾನದ ಆಡಳಿತಾಧಿಕಾರಿ ಕುಸುಮ ನಾಗರಾಜ್ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಉಡುಪಿ ಚಿತ್ರಕಲಾ ಮಂದಿರದ ನಿರ್ದೇಶಕ ಯು.ಸಿ.ನಿರಂಜನ್ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಹೊಟೇಲ್ ಉದ್ಯಮಿ ಅಜಿತ್ ಪಿ.ಶೆಟ್ಟಿ, ಕರ್ನಾಟಕ ಲಲಿತಾ ಕಲಾ ಅಕಾಡೆಮಿಯ ಮಾಜಿ ಸದಸ್ಯ ರಾಘವೇಂದ್ರ ಕೆ.ಅಮೀನ್ ಮತ್ತು ಚಿತ್ರಕಲಾ ಮಂದಿರದ ಪ್ರಾಂಶುಪಾಲ ರಾಜೇಂದ್ರ ಪೂಜಾರಿ ತ್ರಾಸಿ ಉಪಸ್ಥಿತರಿ ದ್ದರು. ಪ್ರದೀಪ್ ಕುಮಾರ್ ಸ್ವಾಗತಿಸಿದರು. ಹರೀಶ್ ನಾಯ್ಕ್ ವಂದಿಸಿದರು. ಈ ಪ್ರದರ್ಶನವು ಡಿ.೫ರವರೆಗೆ ಪ್ರತಿದಿನ ಬೆಳಗ್ಗೆ ೧೦ ಗಂಟೆಯಿಂದ ಸಂಜೆ ೬ ರವರೆಗೆ ನಡೆಯಲಿದೆ.