ಮತದಾರ ಪಟ್ಟಿ ಹಗರಣ ಪ್ರಜಾಪ್ರಭುತ್ವದ ಕಗ್ಗೊಲೆ: ಮಂಜುನಾಥ್ ಭಂಡಾರಿ

Update: 2022-12-02 14:12 GMT

ಉಡುಪಿ: ಮತದಾರರ ಹೆಸರನ್ನು ಮತದಾರರ ಪಟ್ಟಿಯಿಂದ  ಕೈಬಿಡುವ ಮೂಲಕ ಈ ಸರಕಾರ  ಪ್ರಜಾ ಪ್ರಭುತ್ವದ ಕಗ್ಗೊಲೆ ನಡೆಸಿದೆ ಎಂದು ವಿಧಾನ ಪರಿಷತ್ ಸದಸ್ಯ ಮಂಜುನಾಥ್ ಭಂಡಾರಿ ಹೇಳಿದ್ದಾರೆ.

ಉಡುಪಿಯಲ್ಲಿ ಇಂದು ಸುದ್ದಿಗಾರರ ಜೊತೆ ಮಾತನಾಡಿದ ಭಂಡಾರಿ, ನ್ಯಾ. ಸಂತೋಷ್ ಹೆಗ್ಡೆಯವರೇ ಇದೊಂದು ಗಂಭೀರ ಆರೋಪ ಎಂದು ಹೇಳಿದ್ದಾರೆ. ಈ ಹಗರಣದಲ್ಲಿ ಇಬ್ಬರು ಐಎಎಸ್ ಅಧಿಕಾರಿಗಳ ತಲೆ ದಂಡವೂ ಆಗಿದೆ. ಆದ್ದರಿಂದ ಈ ಹಗರಣ ನಡೆದಿರುವುದು ಸತ್ಯ ಎಂದರ್ಥ ಎಂದವರು ನುಡಿದರು.

ಪ್ರತೀ ಕ್ಷೇತ್ರದಲ್ಲೂ 10ರಿಂದ 15 ಸಾವಿರ ಮತದಾರರ ಹೆಸರನ್ನು ಡಿಲೀಟ್ ಮಾಡಲಾಗಿದೆ. ಮನೆಯಲ್ಲಿ ಇದ್ದ ವರು, ಮನೆಯಲ್ಲಿ ಇಲ್ಲದವರು ಎಲ್ಲರ ಹೆಸರನ್ನೂ ತೆಗೆದಿದ್ದಾರೆ. ಸರಕಾರ ಚಿಲುಮೆ ಎಂಬ ಥರ್ಡ್ ಪಾರ್ಟಿ ಮೂಲಕ ಈ ಬೋಗಸ್ ನಡೆಸಿದೆ ಎಂದು ಅವರು ಹೇಳಿದರು.

ಕಾಂಗ್ರೆಸ್ ಪಕ್ಷ ಈ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಲಿದೆ. ಪ್ರತೀ ಮತದಾರರೂ ಮತ ದಾರರ ಪಟ್ಟಿಯಲ್ಲಿ ತಮ್ಮ ಹೆಸರು ಇದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ಕಾಂಗ್ರೆಸ್ ಕೂಡ ಈ ವಿಷಯದಲ್ಲಿ ಮತದಾರರ ಜೊತೆ ಇರಲಿದೆ ಎಂದು ಮಂಜುನಾಥ ಭಂಡಾರಿ ತಿಳಿಸಿದರು.

Similar News