ಡಿ.3ರಿಂದ ರಾಷ್ಟ್ರಮಟ್ಟದ ಕರಾಟೆ ಸ್ಪರ್ಧಾಕೂಟ

Update: 2022-12-02 15:01 GMT

ಉಡುಪಿ, ಡಿ.2: ಕುಬುಡೋ ಬುಡೋಕಾನ್ ಕರಾಟೆ ಡೋ ಅಸೋಸಿ ಯೇಶನ್ ವತಿಯಿಂದ ಐದನೇ ರಾಷ್ಟ್ರಮಟ್ಟದ ಆಹ್ವಾನಿತ ತಂಡಗಳ ಕರಾಟೆ ಸ್ಪರ್ಧಾಕೂಟ ಕೆಬಿಕೆ ಕಪ್-2022ನ್ನು ಡಿ.3 ಮತ್ತು 4ರಂದು ಅಜ್ಜರಕಾಡು ಮಹಾತ್ಮ ಗಾಂಧಿ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆ.

ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸ್ಪರ್ಧಾ ಕೂಟದ ಸಂಚಾಲಕ ಸಂತೋಷ್ ಕುಮಾರ್ ಬೊಳ್ಜೆ, ಪಂದ್ಯಾಟದಲ್ಲಿ ಕರ್ನಾಟಕ ಸೇರಿದಂತೆ 10 ರಾಜ್ಯಗಳ ಒಟ್ಟು 2000 ಸ್ಪರ್ಧಾಗಳು ಭಾಗವಹಿಸಲಿರು ವರು. ಗ್ರಾಂಡ್ ಚಾಂಪಿಯನ್‌ಗಳಿಗೆ ನಗದು ಬಹುಮಾನ ನೀಡಲಾಗುವುದು ಎಂದರು.

ಸ್ಪರ್ಧೆಯನ್ನು ಡಿ.3ರಂದು ಬೆಳಗ್ಗೆ 9ಗಂಟೆಗೆ ಉಡುಪಿ ಶಾಸಕ ಕೆ.ರಘುಪತಿ ಭಟ್ ಉದ್ಘಾಟಿಸಲಿದ್ದು, ಅಂಬಲಪಾಡಿ ದೇವಳದ ಧರ್ಮದರ್ಶಿ ಡಾ.ನಿ.ಬೀ. ವಿಜಯ ಬಲ್ಲಾಳ್ ಆಶೀರ್ವಚನ ನೀಡಲಿರುವರು. ಡಿ.4ರಂದು ಬೆಳಗ್ಗೆ 9 ಗಂಟೆಗೆ 13ವರ್ಷ ಮೇಲ್ಪಟ್ಟವರ ಚಾಂಪಿಯನ್‌ಶಿಪ್ ಉದ್ಘಾಟನೆಗೊಳ್ಳಲಿದೆ. ಸಂಜೆ 6ಗಂಟೆಗೆ ಸಮಾರೋಪ ಸಮಾರಂಭದಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಗುವುದು ಎಂದು ಅವರು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಸ್ಪರ್ಧಾಕೂಟದ ಸಂಚಾಲಕ ರವಿಕುಮಾರ್ ಉದ್ಯಾವರ, ನಿಶಾಂತ್ ಭಟ್, ಸೂರಜ್ ಕುಮಾರ್, ಅಮೃತಾ, ಅಕ್ಷಯ, ಫೈಜಲ್ ಉಪಸ್ಥಿತರಿದ್ದರು.

Similar News