ಫಿಫಾ ವಿಶ್ವಕಪ್: ಸತತ ಮೂರನೇ ಬಾರಿಗೆ ನಾಕೌಟ್ ತಲುಪಿದ ಸ್ವಿಝರ್‌ ಲ್ಯಾಂಡ್‌

Update: 2022-12-03 01:55 GMT

ದೋಹಾ: ಕತರ್‌ ನಲ್ಲಿ ನಡೆಯುತ್ತಿರುವ ಫಿಫಾ ವಿಶ್ವಕಪ್ ಫುಟ್ಬಾಲ್ ಟೂರ್ನಿಯ ಜಿ ಗುಂಪಿನ ಪಂದ್ಯದಲ್ಲಿ ಶುಕ್ರವಾರ ಸೆರ್ಬಿಯಾ ವಿರುದ್ಧ 3-2 ಗೋಲುಗಳ ಜಯ ಸಾಧಿಸಿದ ಸ್ವಿಝರ್‌ ಲ್ಯಾಂಡ್‌ ಸತತ ಮೂರನೇ ಬಾರಿಗೆ ವಿಶ್ವಕಪ್ ಟೂರ್ನಿಯ ನಾಕೌಟ್ ಹಂತ ತಲುಪಿದೆ.

ಗುಂಪಿನ ಎರಡನೇ ಸ್ಥಾನಿಯಾಗಿ ಅಂತಿಮ 16ರ ಘಟ್ಟಕ್ಕೆ ಮುನ್ನಡೆದ ಸ್ವಿಸ್ ತಂಡ ಪ್ರಿಕ್ವಾರ್ಟರ್ ಫೈನಲ್‍ನಲ್ಲಿ ಪೋರ್ಚ್‍ಗಲ್ ವಿರುದ್ಧ ಸೆಣೆಸಲಿದೆ.

ಕ್ಸೆರ್ದಾನ್ ಶಾಕಿರಿ (Xherdan Shaqiri) 974 ಸ್ಟೇಡಿಯಂನಲ್ಲಿ ನಡೆದ ಪಂದ್ಯ ಪ್ರೇಕ್ಷಕರಿಗೆ ಗೋಲುಗಳ ಹಬ್ಬ ಎನಿಸಿತು. ಮೊದಲಾರ್ಧದಲ್ಲಿ ಸ್ವಿಝರ್‌ ಲ್ಯಾಂಡ್‌ ಮುಂದಿತ್ತು. ಆದರೆ ಸೆರ್ಬಿಯಾ ಕೇವಲ 10 ನಿಮಿಷ ಅಂತರದಲ್ಲಿ ಅಜೆಕ್ಸಾಂಡರ್ ಮಿಟ್ರೊವಿಕ್ ಮತ್ತು ದುಸಾನ್ ವಾಲೋವಿಕ್ ಮೂಲಕ ಎರಡು ಗೋಲುಗಳನ್ನು ಗಳಿಸಿದ ಸೆರ್ಬಿಯಾ ಪ್ರತಿದಾಳಿ ನಡೆಸಿತು.

ಆದರೆ ಎರಡನೇ ಅವಧಿ ಮುಗಿಯುವ ಮುನ್ನ ಬ್ರೆಲ್ ಎಂಬೊಲೊ ಪಂದ್ಯಕ್ಕೆ ಮತ್ತೊಂದು ಟ್ವಿಸ್ಟ್ ನೀಡಿ, ಸ್ವಿಸ್ ತಂಡ ಸಮಬಲ ಸಾಧಿಸಲು ನೆರವಾದರು. ಕೊನೆಯ ಅವಧಿಯ ಮೂರನೇ ನಿಮಿಷದಲ್ಲೇ ರೆಮೊ ಫ್ರೂಲರ್ ಮತ್ತೊಂದು ಗೋಲು ಗಳಿಸಿ ಸ್ವಿಸ್ ತಂಡಕ್ಕೆ ಮುನ್ನಡೆ ದೊರಕಿಸಿಕೊಟ್ಟರು.

ಪಂದ್ಯ ಮುಗಿಯಲು ಕೇವಲ 30 ಸೆಕೆಂಡ್‍ಗಳಿದ್ದಾಗಲೂ ಸ್ವಿಸ್ ತಂಡ ಆಕ್ರಮಣಕಾರಿ ಗೋಲು ಗಳಿಸುವ ಪ್ರಯತ್ನ ನಡೆಸಿತು. ನಾಯಕ ಗ್ರೆನಿಟ್ಟ ಕ್ಸಾಕಾ ಅವರ ಹೊಡೆತವನ್ನು ಸೆರ್ಬಿಯನ್ ರಕ್ಷಣಾ ಆಟಗಾರರು ತಡೆದರೆ, ಗೋಲ್‍ಕೀಪರ್ ವಂಜಾ ಮಿಲಿಂಕೊವಿಕ್ ಸವಿಕ್ ಅವರು ಎಂಬೊಲೊ ಮತ್ತು ಕ್ಸಾಕಾ ಅವರ ಹೊಡೆತಗಳನ್ನು ಆಕರ್ಷಕವಾಗಿ ತಡೆದರು.

Similar News