'ನಕಲಿ ತುಪ್ಪ' ಮಾರುತ್ತಿರುವ ರಾಮದೇವ್: ಬಿಜೆಪಿ ಸಂಸದ ಆರೋಪ

Update: 2022-12-03 08:48 GMT

ಕೈಸರ್‌ಗಂಜ್‌: ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ (Brij Bhushan Sharan Singh) ಅವರು ಯೋಗಗುರು ರಾಮ್‌ದೇವ್ (Ramdev) ವಿರುದ್ಧ ವಾಗ್ದಾಳಿ ನಡೆಸಿದ್ದು, ರಾಮದೇವ್ ರನ್ನು 'ಅನಾಚಾರದ ರಾಜ' ಎಂದು ಕರೆದಿದ್ದಾರೆ. ರಾಮದೇವ್, ತನ್ನ ಬ್ರಾಂಡ್‌ನಲ್ಲಿ 'ನಕಲಿ ತುಪ್ಪ'ವನ್ನು ಮಾರಾಟ ಮಾಡುತ್ತಿದ್ದಾರೆ ಎಂದು ಸಿಂಗ್ ಆರೋಪಿಸಿದ್ದಾರೆ ಎಂದು indiatimes.com ವರದಿ ಮಾಡಿದೆ.

ಸುದ್ದಿಗಾರರೊಂದಿಗೆ ಮಾತನಾಡಿದ ಸಿಂಗ್, ಡೈರಿ ಉತ್ಪನ್ನವನ್ನು ಖರೀದಿಸದಂತೆ ಜನರನ್ನು ಮನವಿ ಮಾಡಿದ್ದು, ಜನರು ಹಸುಗಳಿಗೆ ಆಶ್ರಯ ನೀಡಬೇಕು ಮತ್ತು ತುಪ್ಪವನ್ನು ಸ್ವತಃ ತಯಾರಿಸಬೇಕು ಎಂದು ಹೇಳಿದ್ದಾರೆ.

 ದುರ್ಬಲರ ಮಗು ದುರ್ಬಲವಾಗಿ ಹುಟ್ಟುತ್ತದೆ. ಆರೋಗ್ಯವಂತರ ಮಗು ಆರೋಗ್ಯವಂತರಾಗಿ ಜನಿಸುತ್ತದೆ. ಆರೋಗ್ಯವಂತರಾಗಿರಲು ಮನೆಗಳಲ್ಲಿ ಶುಚಿತ್ವ ಹಾಗೂ ಶುದ್ಧ ಹಾಲು, ತುಪ್ಪ ಇರುವುದು ಅತೀ ಅಗತ್ಯ ಎಂದು ಅವರು ಹೇಳಿದ್ದಾರೆ.

ದೇಶಾದ್ಯಂತ ಇರುವ ಋಷಿಮುನಿಗಳು ಮತ್ತು ಸಂತರನ್ನು ಭೇಟಿಯಾಗಿ 'ನಕಲಿ' ಡೈರಿ ಉತ್ಪನ್ನಗಳ ವಿರುದ್ಧ ರಾಷ್ಟ್ರವ್ಯಾಪಿ ಆಂದೋಲನವನ್ನು ಪ್ರಾರಂಭಿಸಲು ಅವರ ಆಶೀರ್ವಾದ ಪಡೆಯುತ್ತೇನೆ ಎಂದು ಅವರು ಹೇಳಿದ್ದಾರೆ.

“ನಾನು ಶೀಘ್ರದಲ್ಲೇ ದ್ರಷ್ಟಾರರು ಮತ್ತು ಸಂತರ ಸಭೆಯನ್ನು ಕರೆದು ಮಹರ್ಷಿ ಪತಂಜಲಿಯ ಹೆಸರಿನ ಶೋಷಣೆಯನ್ನು ತಡೆಯಲು ಅವರನ್ನು ಒತ್ತಾಯಿಸುತ್ತೇನೆ. ರಾಮ್‌ದೇವ್ ಅವರ ಬೆಂಬಲಿಗರು ಉತ್ಪಾದಿಸುವ ಮತ್ತು ಮಾರಾಟ ಮಾಡುತ್ತಿರುವ ನಕಲಿ ಹಾಲಿನ ಉತ್ಪನ್ನಗಳ ವಿರುದ್ಧ ನನ್ನ ಆಂದೋಲನಕ್ಕೆ ಸಂತರು ತಮ್ಮ ಆಶೀರ್ವಾದವನ್ನು ನೀಡುವುದನ್ನು ನಾನು ಖಚಿತಪಡಿಸುತ್ತೇನೆ.  "ಅವರು IANS ಸುದ್ದಿ ಸಂಸ್ಥೆಗೆ ಹೇಳಿದರು. 

ಇದಲ್ಲದೆ, ಸಿಂಗ್ ರಾಮ್‌ದೇವ್ ಅವರ ಯೋಗ ತಂತ್ರಗಳ ಬಗ್ಗೆಯೂ ಗುರಿ ಮಾಡಿದ್ದಾರೆ.  ಉದ್ಯಮಿಯಾಗಿ ಪರಿವರ್ತನೆಗೊಂಡ ದೇವಮಾನವ 'ಕಪಾಲಭಟಿ'ಗೆ ತಪ್ಪು ದಾರಿಯನ್ನು ಕಲಿಸುತ್ತಿದ್ದಾನೆ, ಇದು ಅವನ ಅನುಯಾಯಿಗಳ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ ಎಂದು ಅವರು ಹೇಳಿದರು.

ಈ ನಡುವೆ, ಪತಂಜಲಿ ನಿರ್ದೇಶಕ ಸ್ವಾಮಿ ಬಾಲಕೃಷ್ಣ ಅವರು ಪತಂಜಲಿ ಉತ್ಪನ್ನಗಳ ಗುಣಮಟ್ಟವನ್ನು ಪ್ರಶ್ನಿಸಿದ ಸಿಂಗ್ ಅವರು ಬೇಷರತ್ ಕ್ಷಮೆಯಾಚಿಸುವಂತೆ ಸಿಂಗ್ ಅವರಿಗೆ ಲೀಗಲ್ ನೋಟಿಸ್ ನೀಡಿದ್ದಾರೆ.

Similar News