ಮ್ಯಾನ್ಮಾರ್: 7 ವಿದ್ಯಾರ್ಥಿಗಳಿಗೆ ಮರಣದಂಡನೆ

Update: 2022-12-03 16:46 GMT

ಬ್ಯಾಂಕಾಕ್, ಡಿ.3: ಮ್ಯಾನ್ಮಾರ್‍ (Myanmar)ನ ಸೇನಾಡಳಿತ ಈ ವಾರ ಕನಿಷ್ಟ 7 ಕಾಲೇಜು ವಿದ್ಯಾರ್ಥಿಗಳಿಗೆ ಮರಣದಂಡನೆ ವಿಧಿಸಿದ್ದು ಇದರೊಂದಿಗೆ ಸೇನಾಡಳಿತದಿಂದ ಮರಣದಂಡನೆಗೆ ಒಳಗಾದವರ ಸಂಖ್ಯೆ 139ಕ್ಕೇರಿದೆ ಎಂದು ವಿಶ್ವಸಂಸ್ಥೆ(WHO) ಹೇಳಿದೆ.

ಸೇನಾಡಳಿತವು ಮರಣದಂಡನೆ ಶಿಕ್ಷೆಯನ್ನು  ವಿರೋಧ ಹತ್ತಿಕ್ಕುವ ಸಾಧನವಾಗಿ ಬಳಸಿದೆ. ಮಿಲಿಟರಿ ನ್ಯಾಯಾಲಯ ಬುಧವಾರ 7 ಕಾಲೇಜು ವಿದ್ಯಾರ್ಥಿಗಳಿಗೆ ಮರಣದಂಡನೆ ವಿಧಿಸಿದೆ. ವಿರೋಧವನ್ನು ಹತ್ತಿಕ್ಕಲು ಮರಣದಂಡನೆ ಶಿಕ್ಷೆಯನ್ನು ರಾಜಕೀಯ ಸಾಧನವಾಗಿ ಬಳಸುವ ಮೂಲಕ ಸೇನಾಡಳಿತವು ಹಿಂಸಾಚಾರವನ್ನು ಅಂತ್ಯಗೊಳಿಸುವ ಅಂತರಾಷ್ಟ್ರೀಯ ಸಮುದಾಯದ ಆಶಯಕ್ಕೆ ತನ್ನ ಅಸಡ್ಡೆಯನ್ನು ಜಗಜ್ಜಾಹೀರುಗೊಳಿಸಿದೆ ಎಂದು ಮಾನವ ಹಕ್ಕುಗಳ ವಿಶ್ವಸಂಸ್ಥೆಯ ಹೈಕಮಿಷನರ್ ವೋಕರ್ ಟರ್ಕ್(Walker Turk) ಹೇಳಿದ್ದಾರೆ. ಬ್ಯಾಂಕ್‍ನಲ್ಲಿ ನಡೆದ ಗುಂಡು ಹಾರಾಟದ ಪ್ರಕರಣದಲ್ಲಿ ಒಳಗೊಂಡಿದ್ದಾರೆ ಎಂಬ ಆರೋಪದಲ್ಲಿ ಯಾಂಗಾನ್ ವಿವಿ(Yangon Vv)ಯ ವಿದ್ಯಾರ್ಥಿಗಳನ್ನು ಸೇನಾಡಳಿತ ಕಳೆದ ಎಪ್ರಿಲ್‍ನಲ್ಲಿ ಬಂಧಿಸಿತ್ತು ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ನ್ಯಾಯಯುತ ವಿಚಾರಣೆಯ ಮೂಲಭೂತ ತತ್ವಗಳನ್ನು ಉಲ್ಲಂಘಿಸಿ ಸೇನಾ ನ್ಯಾಯಾಲಯದಲ್ಲಿ ರಹಸ್ಯವಾಗಿ ವಿಚಾರಣೆ ನಡೆಸಿ ಶಿಕ್ಷೆ ವಿಧಿಸುವುದು ಅಂತರಾಷ್ಟ್ರೀಯ ಕಾನೂನಿಗೆ ವಿರುದ್ಧವಾಗಿದೆ. ಗುರುವಾರ ಮತ್ತೆ 4 ಯುವ ಕಾರ್ಯಕರ್ತರಿಗೂ ಮರಣದಂಡನೆ ಶಿಕ್ಷೆ ವಿಧಿಸಿರುವ ಮಾಹಿತಿಯಿದ್ದು ಈ ಬಗ್ಗೆ ವಿಚಾರಣೆ ನಡೆಸಲಾಗುವುದು ಎಂದು ವಿಶ್ವಸಂಸ್ಥೆ ಹೇಳಿದೆ.

Similar News