ಯುಎಇಗೆ ಭಾರತದಿಂದ ಚಹಾ ರಫ್ತು ಪ್ರಮಾಣ ಹೆಚ್ಚಳ

Update: 2022-12-05 17:29 GMT

ಕೋಲ್ಕತ, ಡಿ.5: ಕಾಮನ್‌ವೆಲ್ತ್ ಆಫ್ ಇಂಡಿಪೆಂಡೆನ್ಸ್ ಸ್ಟೇಟ್ಸ್ (ಸಿಐಎಸ್) ಬಳಿಕ ಭಾರತದಿಂದ ಎರಡನೇ ಅತೀ ದೊಡ್ಡ ಚಹಾ ಆಮದುಗಾರನಾಗಿ ಯುಎಇ ಹೊರಹೊಮ್ಮಿದೆ ಎಂದು ವರದಿಯಾಗಿದೆ.

ಭಾರತದ ಚಹಾ ಬೋರ್ಡ್‌ನ ಇತ್ತೀಚಿನ ಅಂಕಿಅಂಶದ ಪ್ರಕಾರ, 2022ರ ಜನವರಿಯಿಂದ ಸೆಪ್ಟಂಬರ್‌ವರೆಗಿನ ಅವಧಿಯಲ್ಲಿ ಯುಎಇ ಭಾರತದಿಂದ 28.58 ದಶಲಕ್ಷ ಕಿ.ಗ್ರಾಂನಷ್ಟು ಚಹಾವನ್ನು ಭಾರತದಿಂದ ಆಮದು ಮಾಡಿಕೊಂಡಿದ್ದು 2021ರ ಇದೇ ಅವಧಿಗೆ ಹೋಲಿಸಿದರೆ ಇದು 159%ದಷ್ಟು ಏರಿಕೆಯಾಗಿದೆ. 2022ರ ಜನವರಿಯಿಂದ ಸೆಪ್ಟಂಬರ್‌ವರೆಗಿನ ಅವಧಿಯಲ್ಲಿ ಸಿಐಎಸ್ ದೇಶಗಳು 38.06 ದಶಲಕ್ಷ ಕಿ.ಗ್ರಾಂನಷ್ಟು ಚಹಾ ಆಮದು ಮಾಡಿಕೊಂಡಿದ್ದು 2021ರ ಇದೇ ಅವಧಿಯಲ್ಲಿ 33.34 ದಶಲಕ್ಷ ಕಿ.ಗ್ರಾಂನಷ್ಟು ಚಹಾ ಆಮದು ಮಾಡಿಕೊಂಡಿತ್ತು. 2022ರ ಜನವರಿಯಿಂದ ಸೆಪ್ಟಂಬರ್ ಅವಧಿಯಲ್ಲಿ ಭಾರತದಿಂದ 165.58 ದಶಲಕ್ಷ ಕಿ.ಗ್ರಾಂ ಚಹಾ ರಫ್ತಾಗಿದ್ದು, 2021ರ ಇದೇ ಅವಧಿಯಲ್ಲಿ 142.55 ದಶಲಕ್ಷ ಕಿ.ಗ್ರಾಂ ಚಹಾ ರಫ್ತಾಗಿತ್ತು. 2020ರಲ್ಲಿ ಭಾರತದ ಚಹಾ ರಫ್ತು ಪ್ರಮಾಣ 230 ದಶಲಕ್ಷ ಕಿ.ಗ್ರಾಂನಷ್ಟಾಗಲಿದೆ ಎಂದು ಇಂಡಿಯನ್ ಟೀ ಅಸೋಸಿಯೇಷನ್ (ಐಟಿಎ) ಅಂದಾಜಿಸಿದೆ.

Similar News