ಎಕ್ಸಿಟ್ ಪೋಲ್‌ಗಳು ಯಾವಾಗಲೂ ಬಿಜೆಪಿಗೆ ಒಲವು ತೋರುತ್ತವೆ: ಆಮ್ ಆದ್ಮಿ ಪಕ್ಷ

Update: 2022-12-06 05:32 GMT

ಹೊಸದಿಲ್ಲಿ: ಆಮ್ ಆದ್ಮಿ ಪಕ್ಷವು ಗುಜರಾತ್‌ನಲ್ಲಿ ಕಳಪೆ ಪ್ರದರ್ಶನ ನೀಡಲಿದೆ ಎಂದು ಭವಿಷ್ಯ ನುಡಿದಿರುವ ಚುನಾವಣೋತ್ತರ ಸಮೀಕ್ಷೆಗಳನ್ನು ಅರವಿಂದ ಕೇಜ್ರಿವಾಲ್ ನೇತೃತ್ವದ ಪಕ್ಷ ತಳ್ಳಿಹಾಕಿದೆ, ಎಕ್ಸಿಟ್ ಪೋಲ್‌ಗಳು ಯಾವಾಗಲೂ ಬಿಜೆಪಿಗೆ ಒಲವು ತೋರುತ್ತವೆ ಎಂದು ಹೇಳಿಕೊಂಡಿದೆ.

"ನಮ್ಮ ಪಕ್ಷವನ್ನು ಕಡೆಗಣಿಸಲಾಗುತ್ತಿದೆ .  ಇದಕ್ಕೆ ಕಾರಣ, "ಎಎಪಿ ಮತದಾರರು ಮೌನವಾಗಿದ್ದಾರೆ.  ಅವರು ಬಿಜೆಪಿ ಬೆಂಬಲಿಗರ ರೀತಿಯಲ್ಲ. ನಮ್ಮ ಕಾರ್ಯಕರ್ತರ ನಿರ್ಧಾರ ಚುನಾವಣೋತ್ತರ ಸಮೀಕ್ಷೆಯಲ್ಲಿ ಹೊರ ಬರುವುದಿಲ್ಲ" ಎಂದು ಪಕ್ಷದ ಹಿರಿಯ ನಾಯಕ ರಾಘವ್ ಚಡ್ಡಾ Raghav Chadha ಎನ್‌ಡಿಟಿವಿಗೆ ತಿಳಿಸಿದರು.

ಎಕ್ಸಿಟ್ ಪೋಲ್‌ಗಳು ದಿಲ್ಲಿಯ ಮಹಾನಗರ ಪಾಲಿಕೆ  ಚುನಾವಣೆಯಲ್ಲಿ ಎಎಪಿ ಗೆಲುವಿನ ಮುನ್ಸೂಚನೆ ನೀಡಿವೆ.

ಆದರೆ ಎಎಪಿ ಎಕ್ಸಿಟ್ ಪೋಲ್  ಭವಿಷ್ಯ ನುಡಿದಿದ್ದಕ್ಕಿಂತ ಉತ್ತಮವಾಗಿ ಕಾರ್ಯನಿರ್ವಹಿಸಲಿದೆ ಎಂದು ಚಡ್ಡಾ ಹೇಳಿದರು.

"ಗುಜರಾತ್‌ನಲ್ಲಿ ಮೊದಲ ಬಾರಿಗೆ ತನ್ನ ಎಲ್ಲಾ ಶಕ್ತಿಯೊಂದಿಗೆ ಸ್ಪರ್ಧಿಸುತ್ತಿರುವ ಪಕ್ಷ ಹೊಸ ಸೇರ್ಪಡೆ.   ಅದನ್ನು ಯಾವಾಗಲೂ ಕಡೆಗಣಿಸಲಾಗುತ್ತದೆ''ಎಂದು ಚಡ್ಡಾ ಹೇಳಿದರು.

ಈ ಸಂದರ್ಭದಲ್ಲಿ, 2013 ರಲ್ಲಿ ದಿಲ್ಲಿಯ ಉದಾಹರಣೆಯನ್ನು ನೀಡಿದ ಚಡ್ಡಾ,"ದಿಲ್ಲಿಯಲ್ಲಿ ನಮ್ಮ ಪಕ್ಷವು   ತನ್ನ ಮೊದಲ ಚುನಾವಣೆಯಲ್ಲಿ ನಾಲ್ಕರಿಂದ ಐದು ಸ್ಥಾನಗಳನ್ನು ಮಾತ್ರ ಗೆಲ್ಲುತ್ತದೆ ಎಂದು ಭವಿಷ್ಯ ನುಡಿಯಲಾಗಿತ್ತು. ಆಗ ನಾವು  28 ಸ್ಥಾನಗಳನ್ನು ಗೆದ್ದುಕೊಂಡಿದ್ದೆವು.  ನಮ್ಮ ಮತದಾರರು ಯಾರೆಂದು ಜನರಿಗೆ ಅಳೆಯಲು ಸಾಧ್ಯವಾಗಲಿಲ್ಲ  ಆಮ್ ಆದ್ಮಿ ಪಕ್ಷವು ಗಮನಾರ್ಹವಾದ ಮತಗಳನ್ನು ಗಳಿಸುತ್ತದೆ ಹಾಗೂ ಗುಜರಾತ್‌ನಲ್ಲಿ ಸರಕಾರ ರಚಿಸುತ್ತದೆ" ಎಂದು ಅವರು ಹೇಳಿದರು.

Similar News