ದಾಳಿ ನಿಲ್ಲಿಸದಿದ್ದರೇ ಮಹಾರಾಷ್ಟ್ರ ಜನತೆಯ ನಿಲುವು ಬೇರೆಯೇ ಆಗಲಿದೆ: ಶರದ್ ಪವಾರ್ ಎಚ್ಚರಿಕೆ

ಬಸ್ ಗಳ ಮೇಲಿನ ದಾಳಿಗೆ ಖಂಡನೆ

Update: 2022-12-06 16:49 GMT

ಮುಂಬೈ, ಡಿ.21: ಬೆಳಗಾವಿ ಜಿಲ್ಲೆಯಲ್ಲಿ ಮಹಾರಾಷ್ಟ್ರದ  ಬಸ್ ಗಳ ಮೇಲೆ ನಡೆದ ದಾಳಿಯನ್ನು ಎನ್ಸಿಪಿ (NCP)ಅಧ್ಯಕ್ಷ ಶರದ್ ಪವಾರ್ (Sharad Pawar)ಅವರು ತೀವ್ರವಾಗಿ ಖಂಡಿಸಿದ್ದಾರೆ. ‘‘ಗಡಿವಿವಾದದ ಬಗ್ಗೆ ಮಹಾರಾಷ್ಟ್ರವು  ತಾಳ್ಮೆಯ ನಿಲುವನ್ನು ಅನುಸರಿಸುತ್ತಲೇ ಬಂದಿದೆ.

ಒಂದು ವೇಳೆ ಮುಂದಿನ 24 ತಾಸುಗಳಲ್ಲಿ ಈ ದಾಳಿಗಳು ನಿಲ್ಲದೆ ಇದ್ದಲ್ಲಿ, ಮಹಾರಾಷ್ಟ್ರದ ಜನತೆ ಬೇರೆಯೇ ನಿಲುವನ್ನು ತೆಗೆದುಕೊಳ್ಳಲಿದ್ದಾರೆ. ಇದಕ್ಕೆ ಕರ್ನಾಟಕದ ಮುಖ್ಯಮಂತ್ರಿಯವರೇ ಹೊಣೆಗಾರರಾಗಲಿದ್ದಾರೆ ಎಂದು ಎಚ್ಚರಿಕೆ ನೀಡಿದ್ದಾರೆ. ಬೆಳಗಾವಿ ಪರಿಸ್ಥಿತಿಯ ಬಗ್ಗೆ ಸಂಸತ್ ನ ಚಳಿಗಾಲದ ಅಧಿವೇಶನದಲ್ಲಿ ಮಾತನಾಡುವಂತೆ  ಮಹಾರಾಷ್ಟ್ರ ರದ ಸಂಸದರಿಗೆ ಮನವಿ ಮಾಡುವುದಾಗಿಯೂ ಪವಾರ್ ತಿಳಿಸಿದ್ದಾರೆ.

ಮಹಾರಾಷ್ಟ್ರದಲ್ಲಿನ ಇತರ ಪ್ರತಿಪಕ್ಷಗಳು ಕೂಡಾ ಮಹಾರಾಷ್ಟ್ರದ ವಾಹನಗಳ ಮೇಲಿನ ದಾಳಿಯನ್ನು ಖಂಡಿಸಿದ್ದು, ಕರ್ನಾಟಕ ಸರಕಾರಕ್ಕೆ ಸೂಕ್ತ ಉತ್ತರ ನೀಡುವಂತೆ  ಅಲ್ಲಿ ನ ರಾಜ್ಯಸರಕಾರಕ್ಕೆ ಸವಾಲೆಸೆದಿವೆ.

ಮಹಾರಾಷ್ಟ್ರ-ಕರ್ನಾಟಕ ಗಡಿ ಸಮನ್ವಯ ಸಚಿವರುಗಳಾದ ಚಂದ್ರಕಾಂತ ಪಾಟೀಲ್  ಹಾಗೂ ಶಂಭುರಾಜ ದೇಸಾಯಿ ಅವರು ಕನಿಷ್ಠ ಪಕ್ಷ ಕಬಡ್ಡಿ ಪಂದ್ಯದಲ್ಲಿ ಮಾಡುವಂತೆ ಗಡಿರೇಖೆಯನ್ನು ತಲುಪಿಯಾದರೂ ಹಿಂದೆ ಬರಬಹುದಿತ್ತೆಂದು ಶಿವಸೇನಾ (ಉದ್ಧವ್ಠಾಕ್ರೆ ಬಣ) ಸಂಸದ ಸಂಜಯ್ ರಾವತ್ (Sanjay Rawat)ಹೇಳಿದ್ದಾರೆ.

Similar News