ಉತ್ತರ ಕೊರಿಯಾ: `ಕೆ-ಡ್ರಾಮಾ' ವೀಕ್ಷಿಸಿದ ಇಬ್ಬರು ವಿದ್ಯಾರ್ಥಿಗಳಿಗೆ ಮರಣದಂಡನೆ

Update: 2022-12-06 17:20 GMT

ಪ್ಯೋಂಗ್ಯಾಂಗ್, ಡಿ.6: ದಕ್ಷಿಣ ಕೊರಿಯಾದ ಸಿನೆಮಾ (ಕೆ ಡ್ರಾಮಾ) ಹಾಗೂ ಅಮೆರಿಕದ ಸಿನೆಮಾ ವೀಕ್ಷಿಸಿದ ಇಬ್ಬರು ಹೈಸ್ಕೂಲ್ ವಿದ್ಯಾರ್ಥಿಗಳನ್ನು ಉತ್ತರ ಕೊರಿಯಾ ಗಲ್ಲಿಗೇರಿಸಿದೆ ಎಂದು ವರದಿಯಾಗಿದೆ.

ದಕ್ಷಿಣ ಕೊರಿಯಾದ ಸಿನೆಮಾ ವೀಕ್ಷಿಸುವುದನ್ನು ಉತ್ತರ ಕೊರಿಯಾ ನಿಷೇಧಿಸಿದೆ. 16 ಮತ್ತು 17 ವರ್ಷದ  ಈ ಇಬ್ಬರು ವಿದ್ಯಾರ್ಥಿಗಳು ಶಾಲೆಯ ಕೋಣೆಯೊಂದರಲ್ಲಿ ಕೆ ಡ್ರಾಮಾ ವೀಕ್ಷಿಸಿದ್ದರಿಂದ ಅವರನ್ನು ಬಂಧಿಸಿ ರಾಜಧಾನಿಯ ವಾಯುನೆಲೆಯ ಮೈದಾನದಲ್ಲಿ ಸ್ಥಳೀಯರ ಸಮ್ಮುಖದಲ್ಲಿ ಗಲ್ಲಿಗೇರಿಸಲಾಗಿದೆ ಎಂದು ವರದಿಯಾಗಿದೆ

Similar News