ಉತ್ತರ ಕೊರಿಯಾ: ದಕ್ಷಿಣ ಕೊರಿಯಾ, ಅಮೆರಿಕದ ಚಲನಚಿತ್ರ ವೀಕ್ಷಿಸಿದ ಇಬ್ಬರು ಯುವಕರಿಗೆ ಗಲ್ಲು; ವರದಿ

Update: 2022-12-07 04:43 GMT

ಹೊಸದಿಲ್ಲಿ: ದಕ್ಷಿಣ ಕೊರಿಯಾ ಮತ್ತು ಅಮೆರಿಕದ ಚಲನಚಿತ್ರ ವೀಕ್ಷಿಸಿದ ಆರೋಪದಲ್ಲಿ ಇಬ್ಬರು ಯುವಕರನ್ನು ಉತ್ತರ ಕೊರಿಯಾದಲ್ಲಿ ಗಲ್ಲಿಗೇರಿಸಿರುವ ಬಗ್ಗೆ ndtv.com ವರದಿ ಮಾಡಿದೆ.

ಕೆ-ಡ್ರಾಮಾ ಎಂದು ಕರೆಯಲಾಗುವ ದಕ್ಷಿಣ ಕೊರಿಯಾದ ಚಲನಚಿತ್ರಗಳನ್ನು ವೀಕ್ಷಿಸುವುದು ಅಥವಾ ಹಂಚುವುದನ್ನು ಉತ್ತರ ಕೊರಿಯಾದಲ್ಲಿ ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.

ಉತ್ತರ ಕೊರಿಯಾದ ರ‍್ಯಾಂಗಾಂಗ್ ಪ್ರಾಂತ್ಯದಲ್ಲಿ ಕಳೆದ ಅಕ್ಟೋಬರ್‌ ನಲ್ಲಿ ಪರಸ್ಪರ ಭೇಟಿಯಾದ ಇಬ್ಬರು ಯುವಕರು ಹಲವು ದಕ್ಷಿಣ ಕೊರಿಯಾ ಹಾಗೂ ಅಮೆರಿಕದ ಡ್ರಾಮಾ ಶೋಗಳನ್ನು ವೀಕ್ಷಿಸಿದ್ದರು ಎಂದು 'the Independent' ವರದಿ ಮಾಡಿದೆ.

ನಗರದ ವಾಯುನೆಲೆಯ ಮೈದಾನದಲ್ಲಿ ಸಾರ್ವಜನಿಕರ ಸಮ್ಮುಖದಲ್ಲೇ ಇಬ್ಬರನ್ನು ಗಲ್ಲಿಗೇರಿಸಲಾಗಿದೆ ಎಂದು ಮಿರರ್ ಪತ್ರಿಕೆ ವರದಿ ಮಾಡಿದೆ.

ಈ ಹತ್ಯೆ ಅಕ್ಟೋಬರ್‌ ನಲ್ಲಿ ನಡೆದಿದ್ದರೂ, ಇದರ ಮಾಹಿತಿ ಕಳೆದ ವಾರವಷ್ಟೇ ಬಹಿರಂಗಗೊಂಡಿದೆ. ಇಬ್ಬರು ಯುವಕರು ಎಸಗಿದ್ದು ಅನಿಷ್ಟ ಕೃತ್ಯ. ಆದ್ದರಿಂದ ಎಲ್ಲ ನಿವಾಸಿಗಳು ಗಲ್ಲಿಗೇರಿಸುವ ಭಯಾನಕ ದೃಶ್ಯವನ್ನು ನೋಡುವಂತೆ ವ್ಯವಸ್ಥೆ ಮಾಡಲಾಗಿತ್ತು ಎಂದು ಸರ್ಕಾರ ಹೇಳಿರುವುದಾಗಿ ndtv.com ವರದಿ ಮಾಡಿದೆ.

Similar News