ಆರ್ ಬಿ ಐನಿಂದ ರೆಪೊ ದರ ಏರಿಕೆ, ಸಾಲ ಮತ್ತಷ್ಟು ದುಬಾರಿ!

Update: 2022-12-07 07:32 GMT

ಹೊಸದಿಲ್ಲಿ: ಭಾರತೀಯ ರಿಸರ್ವ್ ಬ್ಯಾಂಕ್(RBI) ರೆಪೊ ದರವನ್ನು ತಕ್ಷಣದಿಂದ ಶೇ.0.35ರಷ್ಟು ಹೆಚ್ಚಿಸಿದೆ. ರೆಪೊ ದರವನ್ನು 36 ಮೂಲಾಂಶ, ಅಂದರೆ ಶೇ.6.25ಕ್ಕೆ ಹೆಚ್ಚಿಸಲು ಆರ್ ಬಿಐನ ಹಣಕಾಸು ನೀತಿ ಸಮಿತಿ(ಎಂಪಿಸಿ)ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ ಎಂದು ಆರ್ ಬಿ ಐ ಗವರ್ನರ್ ಶಕ್ತಿಕಾಂತ್ ದಾಸ್ ಹೇಳಿದ್ದಾರೆ.

ಆರ್ ಬಿ ಐ ಈಗಾಗಲೇ ರೆಪೊ ದರವನ್ನು ಮೂರು ಬಾರಿ ಶೇ.0.50ರಷ್ಟು ಹೆಚ್ಚಿಸಿದೆ. ಚಿಲ್ಲರೆ  ಹಣದುಬ್ಬರವು ಕಡಿಮೆ ಆಗುತ್ತಿರುವುದರಿಂದ ಹಾಗೂ ಆರ್ಥಿಕ ಬೆಳವಣಿಗೆಗೆ ಉತ್ತೇಜನ ನೀಡುವ ಸಲುವಾಗಿ ರೆಪೊ ದರವನ್ನು ಶೇ.0.25ರಿಂದ ಶೇ.0.35ರ ತನಕ ಹೆಚ್ಚಿಸಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಈ ದರ ಏರಿಕೆಯಿಂದ ವಿವಿಧ ಸಾಲಗಳ ಮೇಲಿನ ಬಡ್ಡಿ ದರ ಕೂಡ ಹೆಚ್ಚಾಗಲಿದೆ. ಠೇವಣಿ ಸೌಲಭ್ಯಗಳ ಮೇಲಿನ ದರವನ್ನು ಕೂಡ ಹೆಚ್ಚಿಸಲಾಗಿದೆ.

Similar News