ಡಿ.13ರಂದು ವಿಶೇಷ ಚೇತನರ ಕಲಾಸೌರಭ, ಕೌಶಲ್ಯದ ಕಲರವ

Update: 2022-12-07 14:42 GMT

ಉಡುಪಿ, ಡಿ.7: ಆಟಿಸಂ ಸೊಸೈಟಿ ಉಡುಪಿ, ಕಮಲಾ ಬಾಳಿಗಾ ಟ್ರಸ್ಟ್ ಮತ್ತು ಡಾ.ಎ.ವಿ. ಬಾಳಿಗಾ ಆಸ್ಪತ್ರೆ, ಡಿಸಬಿಲಿಟಿ ಎನ್‌ಜಿಓ ಅಲಯನ್ಸ್ ಬೆಂಗಳೂರು ಮತ್ತು ಜೆಸಿಐ ಉಡುಪಿ ಇಂದ್ರಾಳಿ ಸಹಯೋಗದಲ್ಲಿ ವಿಶ್ವ ವಿಕಲಚೇತನರ ದಿನಾಚರಣೆ ಅಂಗವಾಗಿ ವಿಶೇಷ ಚೇತನರ ಕೌಶಲ್ಯ ಅನಾವರಣದ ಕಲಾ ಸೌರಭ ವಿಶೇಷ ಕುಸುಮಗಳ ಕೌಶಲ್ಯದ ಕಲರವ ಡಿ.13ರಂದು ಉಡುಪಿ ಪುರಭವನದಲ್ಲಿ ನಡೆಯಲಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮನೋವೈದ್ಯ ಡಾ.ಪಿ.ವಿ.ಭಂಡಾರಿ, ವಿಶೇಷಚೇತನರ ಕೌಶಲ್ಯವನ್ನು ಮತ್ತು ವಿಶೇಷ ಶಾಲೆಗಳಲ್ಲಿ ವಿಶೇಷ ಶಿಕ್ಷಕರ ತರಬೇತಿ ಮತ್ತು ನೆರವಿನಿಂದ ವಿಶೇಷಚೇತನರು ತಯಾರಿಸಿರುವ ಕರಕುಶಲ ವಸ್ತುಗಳ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಉಡುಪಿ ಜಿಲ್ಲೆಯ ವಿಶೇಷ ಶಾಲೆಗಳ ಪುಟಾಣಿಗಳ ಕೌಶಲ್ಯವನ್ನು ಒರೆಗೆ ಹಚ್ಚಲು ವಿಶಿಷ್ಟ ವೇದಿಕೆ ಇದಾಗಿದೆ ಎಂದರು.

14 ವಿಶೇಷ ಚೇತನ ಶಾಲೆಗಳ ಪೈಕಿ 12 ಶಾಲೆಗಳಿಂದ ವಿಶೇಷಚೇತನರು ಭಾಗವಹಿಸಲಿದ್ದು, ಅವರಿಂದ ತಯಾರಿಸಿದ ವಸ್ತುಗಳ ಪ್ರದರ್ಶನ ಹಾಗೂ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ. ಸ್ಟಾಲ್‌ಗಳಿಗೆ ಯಾವುದೇ ಶುಲ್ಕವಿಲ್ಲ. ವಿಶೇಷ ಚೇತನರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದ್ದು, ವಿಜೇತ ಶಾಲೆಗಳಿಗೆ ಪ್ರಥಮ 8888ರೂ., ದ್ವಿತೀಯ 6666ರೂ., ತೃತೀಯ 4444ರೂ. ಬಹುಮಾನಗಳನ್ನು ನೀಡಲಾಗುವುದು ಎಂದರು.
ಸುದ್ದಿಗೋಷ್ಠಿಯಲ್ಲಿ ಕಾರ್ಯಕ್ರಮ ಉಸ್ತುವಾರಿಗಳಾದ ಕೀರ್ತೇಶ್ ಎಸ್., ಶ್ರುತಿ ಶೆಟ್ಟಿ ಉಪಸ್ಥಿತರಿದ್ದರು.

Similar News