ಉಡುಪಿ: ಶೇ.40.16 ಮಕ್ಕಳಿಗೆ ಜೆಇ ಲಸಿಕೆ

Update: 2022-12-07 14:46 GMT

ಉಡುಪಿ, ಡಿ.7: ಮೆದುಳು ಜ್ವರ (ಜೆಇ) ಬಾರದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಒಂದು ವರ್ಷದಿಂದ 15 ವರ್ಷ ದೊಳಗಿನ ಮಕ್ಕಳಿಗೆ  ನೀಡಲಾಗುತ್ತಿರುವ ಜೆ.ಇ. ಲಸಿಕೆಯನ್ನು ಅಭಿಯಾನದ ಮೂರನೇ ದಿನದ ಕೊನೆಗೆ ಒಟ್ಟು ಶೇ.40.16ರಷ್ಟು ಮಕ್ಕಳಿಗೆ ನೀಡಲಾಗಿದೆ.

ಡಿ.24ರವರೆಗೆ ಜಿಲ್ಲೆಯ 2,18,324 ಮಕ್ಕಳಿಗೆ ಜೆಇ ಲಸಿಕೆ ನೀಡಲಾಗುತಿದ್ದು, ಬುಧವಾರ ಸಂಜೆಯವರೆಗೆ ಒಟ್ಟು 87,679 (ಶೇ.40.16) ಮಕ್ಕಳಿಗೆ ಚುಚ್ಚುಮದ್ದು ನೀಡಲಾಗಿದೆ ಎಂದು ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ.ಎಂ.ಜಿ. ರಾಮ ತಿಳಿಸಿದ್ದಾರೆ.

ಉಡುಪಿ ತಾಲೂಕಿನ 1,01,087 ಮಕ್ಕಳಲ್ಲಿ 36,177 (ಶೇ.35.79), ಕುಂದಾಪುರ ತಾಲೂಕಿನ 76,715 ಮಕ್ಕಳಲ್ಲಿ 32,809 (ಶೇ.42.77) ಹಾಗೂ ಕಾರ್ಕಳ ತಾಲೂಕಿನ 40,522 ಮಕ್ಕಳಲ್ಲಿ 18,693(ಶೇ.46.13) ಮಕ್ಕಳಿಗೆ ಜೆ.ಇ. ಲಸಿಕೆ ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

Similar News