ಗುಜರಾತ್: 1950 ರ ದಶಕದಿಂದಲೂ ಕಾಂಗ್ರೆಸ್ ಭದ್ರಕೋಟೆಯಾದ ಬುಡಕಟ್ಟು ಪ್ರದೇಶದಲ್ಲಿ ಬಿಜೆಪಿ ಪ್ರಾಬಲ್ಯ

Update: 2022-12-08 06:53 GMT

ಅಹಮದಾಬಾದ್: ಗುಜರಾತ್ ವಿಧಾನಸಭಾ ಚುನಾವಣೆಯ ಮತ ಎಣಿಕೆ ಪ್ರಗತಿಯಲ್ಲಿದ್ದು ಕಾಂಗ್ರೆಸ್ ಪ್ರಾಬಲ್ಯವಿರುವ ಬುಡಕಟ್ಟು ಪ್ರದೇಶದ ಬಹುತೇಕ ಎಲ್ಲ ಸ್ಥಾನಗಳನ್ನು ಬಿಜೆಪಿ ವಶಪಡಿಸಿಕೊಳ್ಳಲು ಸಜ್ಜಾಗಿದೆ. ಕಾಂಗ್ರೆಸ್  20 ಕ್ಕಿಂತ ಕಡಿಮೆ ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಇದು ರಾಜ್ಯದಲ್ಲಿ ಇದುವರೆಗಿನ ಕಳಪೆ ಪ್ರದರ್ಶನಗಳಲ್ಲಿ ಒಂದಾಗಿದೆ.

  ರಾಜ್ಯದಲ್ಲಿ ಯಾವಾಗಲೂ ಬಡವರು ಮತ್ತು ಹಿಂದುಳಿದವರ ನಡುವೆ ತನ್ನ ಪ್ರಮುಖ ಮತದಾರರ ಗುಂಪನ್ನು ಹೊಂದಿದ್ದ ಕಾಂಗ್ರೆಸ್, 1950 ರ ದಶಕದಿಂದಲೂ ಬುಡಕಟ್ಟು ವಲಯದಲ್ಲಿ ಪ್ರಾಬಲ್ಯ ಸಾಧಿಸಿತ್ತು. ಇದೇ ಮೊದಲ ಬಾರಿಗೆ ಈ ಕ್ಷೇತ್ರದಲ್ಲಿ ಬಿಜೆಪಿ ಭಾರೀ ಅಬ್ಬರ ಮಾಡುತ್ತಿದೆ.

Similar News