ಇಸ್ರೇಲ್: ಸಂಸತ್ತಿನಲ್ಲಿ ಬಹುಮತ ಪಡೆದ ನೆತನ್ಯಾಹು

Update: 2022-12-08 17:34 GMT

ಟೆಲ್‌ಅವೀವ್, ಡಿ.8: ಸರಕಾರ ರಚಿಸಲು ಸಾಕಷ್ಟು ಸಂಖ್ಯಾಬಲವನ್ನು ಸಾಧಿಸಲು ಶಕ್ತರಾಗಿರುವ ಬೆಂಜಮಿನ್ ನೆತನ್ಯಾಹು ಇಸ್ರೇಲ್‌ನ ನೂತನ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸುವುದು ಬಹುತೇಕ ಖಚಿತವಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

 ನೆತನ್ಯಾಹು ಅವರ ಲಿಕುಡ್ ಪಕ್ಷ ಯಹೂದಿವಾದಿ ಶಾಸ್ ಪಕ್ಷದೊಂದಿಗೆ ಸೇರಿ ಸರಕಾರ ರಚಿಸಲು ಮೈತ್ರಿ ಮಾಡಿಕೊಂಡಿದೆ. ನವೆಂಬರ್ 1ರಂದು ನಡೆದಿದ್ದ ಚುನಾವಣೆಯಲ್ಲಿ ನೆತನ್ಯಾಹು ಪಕ್ಷ ಸರಳ ಬಹುಮತ ಸಾಧಿಸಿದ್ದರೂ, ಇದೀಗ ಶಾಸ್ ಪಕ್ಷದೊಂದಿಗಿನ ಮೈತ್ರಿಯಿಂದಾಗಿ 120 ಸದಸ್ಯ ಬಲದ ಸಂಸತ್ತಿನಲ್ಲಿ 64 ಸ್ಥಾನ ಪಡೆದಂತಾಗಿದೆ. ಬಲಪಂಥೀಯ ಪಕ್ಷದೊಂದಿಗೆ ನೆತನ್ಯಾಹು ಮೈತ್ರಿ ಮಾಡಿಕೊಂಡಿರುವುದು ದೇಶ ಮತ್ತು ವಿದೇಶದಲ್ಲಿ ಕಳವಳಕ್ಕೆ ಕಾರಣವಾಗಿದೆ. ಇಸ್ರೇಲ್ ನಾಗರಿಕರ ಪರವಾಗಿ ಕಾರ್ಯನಿರ್ವಹಿಸುವ ಬಲಪಂಥೀಯ ಸರಕಾರ ರಚನೆಯ ಬಗ್ಗೆ ಮತ್ತೊಂದು ಹೆಜ್ಜೆ ಇರಿಸಿದ್ದೇವೆ ಎಂದು ನೆತನ್ಯಾಹು ಟ್ವೀಟ್ ಮಾಡಿದ್ದಾರೆ.

Similar News