ಕಾವಳಕಟ್ಟೆ: ಡಿ.9, 10ರಂದು 'ಉಲಮಾ ಸಂಗಮ'

Update: 2022-12-09 09:42 GMT

ಮAಗಳೂರು, ಡಿ.9: ಸುನ್ನಿ  ಜಂಇಯ್ಯತುಲ್ ಉಲಮಾ ಕರ್ನಾಟಕ ಇದರ ಆಶ್ರಯದಲ್ಲಿ ಡಿ.9ರಂದು ಸಂಜೆಯಿಂದ 10ರಂದು ಸಂಜೆಯವರೆಗೆ ಉಲಮಾ ಸಂಗಮವು ಕಾವಲ್‌ಕಟ್ಟೆಯ ಅಲ್ ಖಾದಿಸಾ ಕ್ಯಾಂಪಸ್‌ನಲ್ಲಿ ನಡೆಯಲಿದೆ.

ಸುನ್ನಿ ಜಂಇಯ್ಯತುಲ್ ಉಲಮಾ ಅಧ್ಯಕ್ಷ ಖಾಝಿ ಝೈನುಲ್ ಉಲಮಾ ಮಾಣಿ ಉಸ್ತಾದ್ ಅಧ್ಯಕ್ಷತೆಯಲ್ಲಿ ನಡೆಯುವ ಸಂಗಮವು ಇಂದು ಸಂಜೆ 4ಕ್ಕೆ ಕರ್ನಾಟಕ ಮುಸ್ಲಿಂ ಜಮಾಅತ್ ರಾಜ್ಯಾಧ್ಯಕ್ಷ  ಹಝ್ರತ್ ಡಾ. ಮುಹಮ್ಮದ್ ಫಾಝಿಲ್ ರಝ್ವಿ ಕಾವಲ್‌ಕಟ್ಟೆ  ಧ್ವಜಾರೋಹಣ ಮೂಲಕ ಪ್ರಾರಂಭಗೊಳ್ಳಲಿದೆ. ಸಂಜೆ 4:30ಕ್ಕೆ ಸೈಯದ್ ಇಸ್ಮಾಯೀಲ್ ತಂಙಳ್ ಉಜಿರೆ ದುಆಗೈಯುವರು. ಕೆ. ಎಸ್.ಆಟಕೋಯ ತಂಙಳ್ ಕುಂಬೋಳ್ ಉದ್ಘಾಟಿಸುವರು. ಅಬ್ದುಲ್ ರಝಾಕ್ ಮದನಿ ವಳವೂರು ಪ್ರಾಸ್ತಾವಿಕ ಭಾಷಣ ಮಾಡುವರು.

ಮಗ್ರಿಬ್ ಬಳಿಕ 'ತಪ್ಪು ಕಲ್ಪನೆಗೊಳಗಾಗಿರುವ ಜಿಹಾದ್' ಎಂಬ ವಿಷಯದ ಬಗ್ಗೆ ಅಬ್ದುಲ್ ಜಲೀಲ್ ಸಖಾಫಿ ಚೆರುಶ್ಶೋಲ ಹಾಗೂ ರಾತ್ರಿ 9ಕ್ಕೆ  'ಆಧುನಿಕತೆಯ ಅರಿವಿನಲ್ಲಿ ವಿವಾಹ'  ಎಂಬ ವಿಷಯದ ಬಗ್ಗೆ ಸ್ವಾಲಿಹ್ ಸಅದಿ ತಳಿಪ್ಪರಂಬು ವಿಷಯ ಮಂಡಿಸಲಿದ್ದಾರೆ.

ಡಿ.10ರಂದು ಬೆಳಗ್ಗೆ 6:30 ಕ್ಕೆ ಇಲ್ಮ್ ಮತ್ತು ತಸವ್ವುಫ್ ಎಂಬ ವಿಷಯದ ಬಗ್ಗೆ ಮುಹಿಯುದ್ದೀನ್ ಕಾಮಿಲ್ ಸಖಾಫಿ ತೋಕೆ, 8ಕ್ಕೆ ಮದ್ರಸಗಳ ಸುತ್ತಮುತ್ತ ಎಂಬ ವಿಷಯದಲ್ಲಿ ಅಬ್ದುಲ್ ಅಝೀಝ್  ಫೈಝಿ ಚೆರ್ವಾಡಿ, 10ಕ್ಕೆ ‘ಆತ್ಮ ಶುದ್ದಿ’ಎಂಬ ವಿಷಯದಲ್ಲಿ ಮೌಲಾನ ಪೆರೋಡ್ ಅಬ್ದುರ್ರಹ್ಮಾನ್ ಸಖಾಫಿ, 11:30 ಕ್ಕೆ ‘ಇಸ್ಲಾಮೀ ದಅವತ್’ಎಂಬ ವಿಷಯದಲ್ಲಿ ಸೈಯದ್ ಇಬ್ರಾಹೀಂ ಖಲೀಲ್ ತಂಙಳ್ ಅಲ್ ಬುಖಾರಿ  ಕಡಲುಂಡಿ ವಿಷಯ ಮಂಡಿಸಲಿರುವರು.

ತರಗತಿಗಳಲ್ಲಿ ಕ್ರಮವಾಗಿ ಯು.ಕೆ.ಮುಹಮ್ಮದ್ ಸಅದಿ ವಳವೂರು, ಕೆ.ಎಂ.ಖಾಸಿಮ್ ಮದನಿ ಕರಾಯ, ಮಹ್ಮೂದ್ ಫೈಝಿ ವಾಲೆಮುಂಡೋವು, ಎನ್.ಎಂ.ಅಬ್ದುರ್ರಹ್ಮಾನ್ ಮದನಿ ಜೆಪ್ಪು, ಕೆ.ಎಂ.ಇಬ್ರಾಹೀಂ ಫೈಝಿ ಕನ್ಯಾನ, ಎಚ್.ಐ.ಅಬೂ ಸುಫ್ಯಾನ್ ಮದನಿ ಮುನ್ನುಡಿ ಭಾಷಣ ಮಾಡುವರು

ಅಪರಾಹ್ನ 2ಕ್ಕೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಖಾಝಿ ಸೈಯದ್ ಖುರ್ರತುಸ್ಸಾದಾತ್ ಫಝಲ್ ಕೋಯಮ್ಮ ತಂಙಲ್ ಕೂರತ್‌ ದುಆ ನಡೆಸಲಿದ್ದು ಸಹಾಯಕ ಖಾಝಿ ಸೈಯದ್ ಅಬ್ದುರ್ರಹ್ಮಾನ್ ಸಾದಾತ್ ತಂಙಲ್ ಗುರುವಾಯನಕೆರೆ ಉದ್ಘಾಟಿಸುವರು.  ಸುನ್ನಿ ಜಂಇಯ್ಯತುಲ್ ಉಲಮಾ ಪ್ರಧಾನ ಕಾರ್ಯದರ್ಶಿ ಕೆ.ಪಿ.ಹುಸೈನ್ ಸಅದಿ ಕೆ.ಸಿ.ರೋಡ್ ಪ್ರಾಸ್ತಾವಿಕ ಭಾಷಣ ಮಾಡುವರು. ಕೂಟಂಬಾರ ಅಬ್ದುರ್ರಹ್ಮಾನ್ ದಾರಿಮಿ ಮುಖ್ಯ ಭಾಷಣ ಮಾಡಲಿರುವರು. ಸೈಯದ್ ಎಪಿಎಸ್ ಹುಸೈನ್ ಅಲ್ ಅಹ್ದಲ್ ತಂಙಳ್ ಉಪ್ಪಳ್ಳಿ ಚಿಕ್ಕಮಗಳೂರು, ಸೈಯದ್ ಅಲವಿ ಜಲಾಲುದ್ದೀನ್ ತಂಙಳ್ ಉಜಿರೆ, ಸೈಯದ್ ಅಹ್ಮದ್ ಶಿಹಾಬುದ್ದೀನ್ ತಂಙಳ್ ತಲಕ್ಕಿ, ಸೈಯದ್ ಸಈದುದ್ದೀನ್ ತಂಙಳ್ ಶಿವಮೊಗ್ಗ, ಸೈಯದ್ ಝೈನುಲ್ ಆಬಿದೀನ್ ಜಮಾಲುಲ್ಲೈಲಿ ತಂಙಳ್ ಕಾಜೂರು, ಸೈಯದ್ ಹಬೀಬುಲ್ಲಾ ಪೂಕೋಯ ತಂಙಳ್ ಪೆರುವಾಯಿ, ಸೈಯದ್ ಅಬೂಬಕರ್ ಸಿದ್ದೀಕ್ ತಂಙಳ್ ತೀರ್ಥಹಳ್ಳಿ, ಸೈಯದ್ ಶಿಹಾಬುದ್ದೀನ್ ಅಲ್ ಹೈದ್ರೋಸಿ ತಂಙಳ್ ಕಿಲ್ಲೂರು, ಸೈಯದ್ ಫಝಲ್ ಜಮಾಲುಲ್ಲೈಲಿ ತಂಙಳ್ ಸಬರಬೈಲ್ ವಾದಿ ಇರ್ಫಾನ್, ಸೈಯದ್ ಹಾಮೀಮ್ ತಂಙಳ್ ಬಾಳೆಹೊನ್ನೂರು, ಬಿ.ಎಚ್.ಅಬೂಸಾಲಿಹ್ ಮದನಿ ಆಲಡ್ಕ, ಕೆಎಂ ಹೈದರ್ ಮದನಿ ಕರಾಯ, ಅಬ್ಬಾಸ್ ಸಅದಿ ಪೆರ್ನೆ, ಎಸ್ ಡಿ ಶಾದುಲಿ ಫೈಝಿ ಕೊಟ್ಟಮುಡಿ  ಕೊಡಗು ಉಪಸ್ಥಿತರಿರುವರು. ಅಲ್ಲದೆ. ಕರ್ನಾಟಕದ ವಿವಿಧ ಜಿಲ್ಲೆಗಳಿಂದ ಎರಡು ಸಾವಿರ ಉಲಮಾ ಪ್ರತಿನಿಧಿಗಳು  ಭಾಗವಹಿಸಲಿದ್ದಾರೆ ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.

Similar News