ಡಿ.11ರಂದು ಉಡುಪಿ ಕ್ಷೇತ್ರದ ಸಾಧಕ ಶಾಲೆ, ಸಾಧಕ ಶಿಕ್ಷಕರಿಗೆ ಪ್ರಶಸ್ತಿ ಪ್ರದಾನ

Update: 2022-12-09 14:02 GMT

ಉಡುಪಿ, ಡಿ.9: ಉಡುಪಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪ್ರೌಢಶಾಲೆ ಮತ್ತು ಪದವಿ ಪೂರ್ವ ಕಾಲೇಜುಗಳಲ್ಲಿ ಉತ್ತಮ ಗುಣಮಟ್ಟದ ಸಾಧನೆಯನ್ನು ಮಾಡಿರುವ ಶಾಲೆ, ಕಾಲೇಜುಗಳನ್ನು ಗುರುತಿಸಿ, ಗೌರವಿಸುವ ಸಾಧಕ ಶಾಲೆ ಮತ್ತು ಸಾಧಕ ಶಿಕ್ಷಕ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಡಿ.11ರಂದು ರವಿವಾರ ಅಪರಾಹ್ನ 2 ಗಂಟೆಗೆ ಉಡುಪಿ ಶ್ರೀಕೃಷ್ಣಮಠದ ರಾಜಾಂಗಣದಲ್ಲಿ ನಡೆಯಲಿದೆ.

ರಾಜ್ಯದ ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸುನಿಲ್ ಕುಮಾರ್, ಪರ್ಯಾಯ ಮಠಾಧೀಶರು ಹಾಗೂ ಇತರ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಈ ವರ್ಷ  ದೈಹಿಕ ಶಿಕ್ಷಣ ವಿಭಾಗದಲ್ಲಿ ಸಾಧಕ ಶಿಕ್ಷಕ ಪ್ರಶಸ್ತಿಯನ್ನು ನೀಡಲು ನಿರ್ಧರಿಸಿದ್ದು, ಕ್ರೀಡೆಯಲ್ಲಿ ಶಾಲೆಯ ವಿದ್ಯಾರ್ಥಿಗಳ ಸಾಧನೆ, ಕ್ರೀಡಾಕೂಟದ ಆಯೋಜನೆ ಹಾಗೂ ವಿದ್ಯಾರ್ಥಿಗಳ ಸಂಖ್ಯೆಯ ಆಧಾರದಲ್ಲಿ ಈ ಬಾರಿ ಬ್ರಹ್ಮಾವರ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢ ಶಾಲಾ ವಿಭಾಗದ ಜಗದೀಶ್ ಕೆ. ಇವರನ್ನು ಪ್ರಶಸ್ತಿಗಾಗಿ ಆಯ್ಕೆ ಮಾಡಲಾಗಿದೆ.

ಸಾಧಕ ಶಾಲೆ ಪ್ರಶಸ್ತಿ-2022

ಪದವಿ ಪೂರ್ವ ಕಾಲೇಜು ವಿಭಾಗ: ಕಲಾ ವಿಭಾಗ: ಬ್ರಹ್ಮಾವರ ಸರಕಾರಿ ಪದವಿ ಪೂರ್ವ ಕಾಲೇಜು (ಚಿನ್ನ), ಮಲ್ಪೆ ಸರಕಾರಿ ಪದವಿ ಪೂರ್ವ ಕಾಲೇಜು (ಬೆಳ್ಳಿ).  ವಾಣಿಜ್ಯ ವಿಭಾಗ: ಕೊಕ್ಕರ್ಣೆ ಸರಕಾರಿ ಪದವಿ ಪೂರ್ವ ಕಾಲೇಜು (ಚಿನ್ನ), ಕರ್ಜೆ ಸರಕಾರಿ ಪದವಿ ಪೂರ್ವ ಕಾಲೇಜು (ಬೆಳ್ಳಿ). ವಿಜ್ಞಾನ ವಿಭಾಗ: ಮಲ್ಪೆ ಸರಕಾರಿ ಪದವಿ ಪೂರ್ವ ಕಾಲೇಜು(ಚಿನ್ನ), ಉಡುಪಿ ಸರಕಾರಿ ಪದವಿ ಪೂರ್ವ ಕಾಲೇಜು (ಬೆಳ್ಳಿ).

ಪ್ರೌಢ ಶಾಲಾ ವಿಭಾಗ:

ಸರಕಾರಿ ಶಾಲೆ: ಬ್ರಹ್ಮಾವರದ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢ ಶಾಲಾ ವಿಭಾಗ (ಚಿನ್ನ), ಉಡುಪಿಯ ಬಾಲಕಿಯರ ಸರಕಾರಿ ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗ(ಬೆಳ್ಳಿ). ಅನುದಾನಿತ ಶಾಲೆ: ಉಡುಪಿಯ ಸೈಂಟ್ ಸಿಸಿಲಿ ಪ್ರೌಢಶಾಲೆ (ಚಿನ್ನ), ಚೇರ್ಕಾಡಿಯ ಶಾರದ ಪ್ರೌಢಶಾಲೆ (ಬೆಳ್ಳಿ).ಅನುದಾನ ರಹಿತ ಶಾಲೆ: ಕಲ್ಯಾಣಪುರದ ಮಿಲಾಗ್ರಿಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆ (ಚಿನ್ನ), ಮಲ್ಪೆಯ ಶ್ರೀ ನಾರಾಯಣ ಗುರು ಆಂಗ್ಲ ಮಾಧ್ಯಮ ಶಾಲೆ (ಬೆಳ್ಳಿ).  

ಸಾಧಕ ಶಿಕ್ಷಕರಿಗೆ ಪ್ರಶಸ್ತಿ

ಪ್ರೌಢಶಾಲಾ ವಿಭಾಗ: ಕನ್ನಡ ಮಾಧ್ಯಮ ವಿಭಾಗದಲ್ಲಿ ಚೇರ್ಕಾಡಿ ಶಾರದ ಪ್ರೌಢಶಾಲೆಯ ಶಾಲಿನಿ ಸಿ.ಶೆಟ್ಟಿ (ಕನ್ನಡ ಪ್ರಥಮ ಭಾಷೆ), ರಮೇಶ್ ಶೆಟ್ಟಿ (ಹಿಂದಿ) ಹಾಗೂ ರೇವತಿ ಎಸ್. ಉಪ್ಪೂರ್ (ಸಮಾಜ ವಿಜ್ಞಾನ), ಉಡುಪಿ ನಿಟ್ಟೂರು ಪ್ರೌಢಶಾಲೆಯ ಹೆಚ್.ಎನ್. ಶೃಂಗೇಶ್ವರ (ಸಂಸ್ಕೃತ), ಕಲ್ಯಾಣಪುರ ಮಿಲಾಗ್ರಿಸ್ ಪ್ರೌಢಶಾಲೆಯ ರಿಚಾರ್ಡ್ ಸಲ್ಡಾನ್ಹಾ (ಇಂಗ್ಲೀಷ್), ಉದ್ಯಾವರ ಸೈಂಟ್ ಫ್ರಾನ್ಸಿಸ್ ಕ್ಸೇಯರ್ ಪ್ರೌಢಶಾಲೆಯ ಲೊಲಿಫಾ ಲಿಝಿ ನೊರೋನ್ಹಾ  (ಗಣಿತ), ಉಡುಪಿ ಸರಕಾರಿ ಬಾಲಕಿಯರ ಪ್ರೌಢಶಾಲೆಯ ಕಿರಣ ಕಾಮತ್ ಹಾಗೂ ಜ್ಯೋತಿ (ವಿಜ್ಞಾನ).

ಇಂಗ್ಲೀಷ್ ಮಾಧ್ಯಮ:  ಉಡುಪಿ ಶ್ರೀ ಅನಂತೇಶ್ವರ ಆಂಗ್ಲ ಮಾಧ್ಯಮ ಶಾಲೆಯ ಜಯಮಾಲಾ ನಾಯ್ಕ (ಕನ್ನಡ), ಸುನೀತಾ (ಸಂಸ್ಕೃತ), ಶುಭಾ ಆಚಾರ್ಯ (ಗಣಿತ),  ರಜನಿ ಉಡುಪ ಮತ್ತು ದೀಪಾ ಜಿ.ಟಿ (ವಿಜ್ಞಾನ) ಹಾಗೂ ಎಂ.ಪ್ರೀತಿ (ಸಮಾಜ ವಿಜ್ಞಾನ), ಕಲ್ಯಾಣಪುರ ಮಿಲಾಗ್ರಿಸ್ ಪ್ರೌಢಶಾಲೆಯ ಪ್ರಶಾಂತ್ ಲೋಪೆಜ್ (ಇಂಗ್ಲೀಷ್), ಕಲ್ಯಾಣಪುರ ಮೌಂಟ್ ರೋಸರಿ ಇಂಗ್ಲಿಷ್ ಪ್ರೌಢಶಾಲೆಯ ಮೀನಾ ಫೆರ್ನಾಂಡಿಸ್ (ಹಿಂದಿ). 

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪನಿರ್ದೇಶಕರ ಅಧ್ಯಕ್ಷತೆಯಲ್ಲಿ ಆಯ್ಕೆ ಸಮಿತಿಯು ಸಾಧಕ ಶಾಲೆ ಮತ್ತು ಸಾಧಕ ಶಿಕ್ಷಕರ ಆಯ್ಕೆ ನಡೆಸಿದ್ದು, ಉತ್ತಮ ಫಲಿತಾಂಶದೊಡನೆ, ಫಲಿತಾಂಶದ ಗುಣಮಟ್ಟ ಹಾಗೂ ವಿದ್ಯಾರ್ಥಿಗಳ ಸಂಖ್ಯೆಯನ್ನು ಆಧರಿಸಿ ಈ ಆಯ್ಕೆಯನ್ನು ನಡೆಸಲಾಗಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಪ್ರಕಟಣೆ ತಿಳಿಸಿದೆ.

Similar News