ಮಲ್ಪೆ ಶಿಪ್‌ಯಾರ್ಡ್‌ನಲ್ಲಿ ಪ್ರಥಮ ಚಿಕಿತ್ಸಾ ತರಬೇತಿ

Update: 2022-12-09 14:09 GMT

ಉಡುಪಿ, ಡಿ.9: ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಉಡುಪಿ ಜಿಲ್ಲಾ ಘಟಕದ ವತಿಯಿಂದ ಉಡುಪಿ ಕೊಚ್ಚಿನ್ ಶಿಪ್‌ಯಾರ್ಡ್‌ನಲ್ಲಿ ಮಲ್ಪೆಯ ಸಿಬ್ಬಂದಿಗಳಿಗೆ ಪ್ರಥಮ ಚಿಕಿತ್ಸಾ ತರಬೇತಿ ನೀಡಲಾಯಿತು.

ಪ್ರಥಮ ಚಿಕಿತ್ಸಾ ತರಬೇತುದಾರ ಡಾ.ಸುರೇಶ್ ಶೆಣೈ ಹಾಗೂ ಡಾ.ಕೀರ್ತಿ  ಅಪಘಾತಕ್ಕೊಳಗಾದವರಿಗೆ ಪ್ರಥಮ ಚಿಕಿತ್ಸೆ ನೀಡುವ ವಿಧಾನ, ರಕ್ತಸ್ರಾವವನ್ನು ತಡೆಗಟ್ಟುವ ಕುರಿತು, ಬ್ಯಾಂಡೇಜ್ ಮಾಡುವ ವಿಧಾನ, ಸಿಪಿಆರ್ ಮಾಡುವ ವಿಧಾನ, ಹಾವು ಕಡಿತ, ವಿಷ ಸೇವನೆ, ಉಸಿರುಗಟ್ಟುವಿಕೆ, ಮುಳುಗುವಿಕೆ ಮುಂತಾದ ಸಂದರ್ಭಗಳಲ್ಲಿ ತುರ್ತು ಪರಿಸ್ಥಿತಿಯನ್ನು ನಿಭಾಯಿಸುವ ಕುರಿತು ಪ್ರಾಯೋಗಿಕ ಪ್ರದರ್ಶನಗಳ ಮೂಲಕ ತರಬೇತಿ ನೀಡಿದರು. 

ಸಮಾರೋಪದಲ್ಲಿ ಉಡುಪಿ ಕೊಚ್ಚಿನ್ ಶಿಪ್ ಯಾರ್ಡ್ ಮಲ್ಪೆಯ ಸಿಇಓ ಹರಿಕುಮಾರ್ ಹಾಗೂ ಡೆಪ್ಯೂಟಿ ಜನರಲ್ ಮೆನೇಜರ್ ಅಂಬಾಲವನನ್, ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಉಡುಪಿ ಜಿಲ್ಲಾ ಘಟಕದ ಕಾರ್ಯದರ್ಶಿ ಬಿ.ರತ್ನಾಕರ ಶೆಟ್ಟಿ ಉಪಸ್ಥಿತರಿದ್ದರು.

ಉಡುಪಿ ಕೊಚ್ಚಿನ್ ಶಿಪ್‌ಯಾರ್ಡ್‌ನ 25 ಮಂದಿ ಸಿಬ್ಬಂದಿಗಳಿಗೆ ತರಬೇತಿ ನೀಡಲಾಯಿತು.

Similar News