ಉಡುಪಿ : ಮಹಿಳೆಯರು ಮಕ್ಕಳ ಮೇಲಿನ ಹಿಂಸೆ ತಡೆಗೆ ಒತ್ತಾಯಿಸಿ ಧರಣಿ

Update: 2022-12-09 14:25 GMT

ಉಡುಪಿ: ವಿಶ್ವಸಂಸ್ಥೆಯು ನೀಡಿದ ಕರೆಯಂತೆ ಮಹಿಳೆಯರು ಮತ್ತು ಮಕ್ಕಳ ಮೇಲಿನ ಹಿಂಸಾಚಾರ ನಿರ್ಮೂಲ ನೆಗೆ ಒತ್ತಾಯಿಸಿ ಜನವಾದಿ ಮಹಿಳಾ ಸಂಘಟನೆಯ ಉಡುಪಿ ಜಿಲ್ಲಾ ಸಮಿತಿ ನೇತೃತ್ವದಲ್ಲಿ ಇಂದು ಉಡುಪಿ ಜಿಲ್ಲಾಧಿಕಾರಿ ಕಛೇರಿ ಮುಂದೆ ಧರಣಿ ನಡೆಸಲಾಯಿತು.

ನ್ಯಾ.ವರ್ಮ ಆಯೋಗದ ಎಲ್ಲ ಶಿಫಾರಸ್ಸುಗಳನ್ನು ಜಾರಿ ಮಾಡಬೇಕು. ದುಡಿಯುವ ಸ್ಥಳಗಳಲ್ಲಿ ಮಹಿಳೆಯರಿಗೆ ಸುರಕ್ಷತೆಯನ್ನು ಖಾತ್ರಿಗೊಳಿಸಬೇಕು. ಮಹಿಳಾಪರ ಕಾನೂನುಗಳನ್ನು ಸಮಪರ್ಕವಾಗಿ ಜಾರಿಯಾಗಬೇಕು. ಮಹಿಳೆಯರು ದುಡಿಯುವಂತಹ ಸ್ಥಳಗಳಲ್ಲಿ ಲೈಂಗಿಕ ದೌರ್ಜನ್ಯ ತಡೆ ಸಮಿತಿ ಗಳನ್ನು ಕಡ್ಡಾಯವಾಗಿ ರಚನೆ ಮಾಡಬೇಕು. ಸೈಬರ್ ಕ್ರೈಮ್‌ಗಳನ್ನು ನಿಯಂತ್ರಣ ಮಾಡಬೇಕು ಎಂದು ಒತ್ತಾಯಿಸಲಾಯಿತು.

ಸ್ತ್ರೀಶಕ್ತಿ ಸ್ವಸಹಾಯ ಸಂಘದ ಮಹಿಳೆಯರು ಬ್ಯಾಂಕ್, ಮೈಕ್ರೋ ಫೈನಾನ್ಸ್ ಹಾಗೂ ಧರ್ಮಸ್ಥಳ ಮತ್ತಿತರ ಕಿರುಸಾಲ ಸಂಸ್ಥೆಗಳಲ್ಲಿ ಮಾಡಿರುವ ಸಾಲವನ್ನು ಸಂಪೂರ್ಣವಾಗಿ ಮನ್ನಾ ಮಾಡಬೇಕು. ಮನರೇನಾ ಯೋಜನೆ ಸಮರ್ಪಕ ವಾಗಿ ಜಾರಿಯಾಗಬೇಕು ಮತ್ತು ವರ್ಷಕ್ಕೆ 200 ದಿನ ಕೆಲಸ ಹಾಗೂ 600 ರೂ. ಕೂಲಿ ನೀಡಬೇಕು. ಉಚಿತ ಮತ್ತು ಸಾರ್ವತ್ರಿಕ ಆರೋಗ್ಯ ವ್ಯವಸ್ಥೆಯನ್ನು ಖಾತ್ರಿ ಮಾಡಬೇಕು ಎಂದು ಧರಣಿನಿರತರು ಸರಕಾರ ವನ್ನು ಆಗ್ರಹಿಸಿದರು.

ಬಳಿಕ ಈ ಕುರಿತ ಮನವಿಯನ್ನು ಅಪರ ಜಿಲ್ಲಾಧಿಕಾರಿಯವರಿಗೆ  ಸಲ್ಲಿಸ ಲಾಯಿತು. ಧರಣಿಯಲ್ಲಿ ಜನವಾದಿ ಮಹಿಳಾ ಸಂಘಟನೆಯ ಜಿಲ್ಲಾ ಅಧ್ಯಕ್ಷೆ ಸರೋಜ, ಕಾರ್ಯದರ್ಶಿ ಶೀಲಾವತಿ, ಮುಖಂಡರಾದ ಬಲ್ಕಿಸ್, ಸುನಿತಾ ಶೆಟ್ಟಿ, ಶಶಿಕಲಾ, ಶಾರದಾ, ನಳಿನಿ ಮೊದಲಾದವರು ಉಪಸ್ಥಿತರಿದ್ದರು.

Similar News