ಉಡುಪಿ: ಶೇ.54.98 ಮಕ್ಕಳಿಗೆ ಜೆಇ ಲಸಿಕೆ

Update: 2022-12-09 15:34 GMT

ಉಡುಪಿ, ಡಿ.9: ಮೆದುಳು ಜ್ವರಕ್ಕೆ (ಜೆಇ) ಮುನ್ನೆಚ್ಚರಿಕೆ ಕ್ರಮವಾಗಿ ಒಂದು ವರ್ಷದಿಂದ 15 ವರ್ಷದೊಳಗಿನ ಮಕ್ಕಳಿಗೆ  ನೀಡುವ ಜೆ.ಇ. ಲಸಿಕೆಯನ್ನು ಈವರೆಗೆ ಒಟ್ಟು ಶೇ.54.98ರಷ್ಟು ಮಕ್ಕಳಿಗೆ ನೀಡಲಾಗಿದೆ. 

ಜಿಲ್ಲೆಯ 2,18,324 ಮಕ್ಕಳಿಗೆ ಜೆಇ ಲಸಿಕೆ ನೀಡುವ ಗುರಿ ಇದ್ದು, ಶುಕ್ರವಾರ ಸಂಜೆಯವರೆಗೆ ಇವರಲ್ಲಿ ಒಟ್ಟು 1,20,028 (ಶೇ.54.98) ಮಕ್ಕಳಿಗೆ ಲಸಿಕೆಯ ಚುಚ್ಚುಮದ್ದು ನೀಡಲಾಗಿದೆ ಎಂದು ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ.ಎಂ.ಜಿ. ರಾಮ ತಿಳಿಸಿದ್ದಾರೆ.

ಉಡುಪಿ ತಾಲೂಕಿನ 1,01,087 ಮಕ್ಕಳಲ್ಲಿ 51,475(ಶೇ.50.92), ಕುಂದಾಪುರ ತಾಲೂಕಿನ 76,715 ಮಕ್ಕಳಲ್ಲಿ 43,247 (ಶೇ.56.37) ಹಾಗೂ ಕಾರ್ಕಳ ತಾಲೂಕಿನ 40,522 ಮಕ್ಕಳಲ್ಲಿ 25,306(ಶೇ.62.45) ಮಕ್ಕಳಿಗೆ ಜೆ.ಇ. ಲಸಿಕೆ ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

Similar News