ಪ್ರಧಾನಿ ಮೋದಿ ಆಧುನಿಕ ರಾವಣ, ಧಾರ್ಮಿಕನಂತೆ ಬಿಂಬಿಸಿ ದೇವಾಲಯ ಕೆಡವುತ್ತಿದ್ದಾರೆ: ಸುಬ್ರಮಣಿಯನ್‌ ಸ್ವಾಮಿ

Update: 2022-12-10 16:25 GMT

ಹೊಸದಿಲ್ಲಿ: ಇತ್ತೀಚೆಗಷ್ಟೇ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದ ಬಿಜೆಪಿಯ ಹಿರಿಯ ನಾಯಕ ಹಾಗೂ ಮಾಜಿ ಕೇಂದ್ರ ಸಚಿವ ಸುಬ್ರಮಣಿಯನ್ ಸ್ವಾಮಿ (Subramanian Swamy) ಮತ್ತೊಮ್ಮೆ ಪ್ರಧಾನಿ ನರೇಂದ್ರ ಮೋದಿ (PM Narendra Modi) ವಿರುದ್ಧ ವಾಗ್ದಾಳಿ ನಡೆಸಿದ್ದು, ಮೋದಿ ಆಧುನಿಕ ರಾವಣ ಎಂದು ಹೇಳಿದ್ದಾರೆ.

ತಮ್ಮ ಅಧಿಕೃತ ಟ್ವಿಟರ್ ಹ್ಯಾಂಡಲ್‌ನಿಂದ ಟ್ವೀಟ್ ಮಾಡಿರುವ ಸ್ವಾಮಿ, ಮೋದಿ ಅವರು ಧಾರ್ಮಿಕರಂತೆ ನಟಿಸುತ್ತಿದ್ದಾರೆ ಆದರೆ ವಾರಣಾಸಿ ಮತ್ತು ಉತ್ತರಾಖಂಡದಲ್ಲಿ ದೇವಾಲಯಗಳನ್ನು ಕೆಡವುತ್ತಿದ್ದಾರೆ ಅಥವಾ ದೋಚುತ್ತಿದ್ದಾರೆ ಎಂದು ಹೇಳಿದ್ದಾರೆ.  

ಮಹಾರಾಷ್ಟ್ರದ ಮಾಜಿ ಸಿಎಂ ದೇವೇಂದ್ರ ಫಡ್ನವಿಸ್ ಜೊತೆಗೂಡಿ ಪಂಢರಪುರದ ಪವಿತ್ರ ಕ್ಷೇತ್ರಗಳನ್ನು ಧ್ವಂಸ ಮಾಡಲು ಪ್ರಧಾನಿ ಮೋದಿ ಯೋಜಿಸಿದ್ದಾರೆ ಎಂದು ಅವರು ಆರೋಪಿಸಿದರು.

ಇದನ್ನು ‘ಹತ್ಯಾಕಾಂಡ’ ಎಂದು ಕರೆದಿರುವ ಸ್ವಾಮಿ ಇದನ್ನು ತಡೆದು ನಿಲ್ಲಿಸಲು ಬಾಂಬೆ ಹೈಕೋರ್ಟ್‌ಗೆ ಮೊರೆ ಹೋಗುತ್ತಿದ್ದೇನೆ ಎಂದು ಹೇಳಿದರು.

“ರಾವಣನಂತೆ ಮೋದಿ ಧಾರ್ಮಿಕ ಎಂದು ಹೇಳಿಕೊಳ್ಳುತ್ತಾ ವಾರಣಾಸಿ, ಉತ್ತರಾಖಂಡದಲ್ಲಿ ದೇವಾಲಯಗಳನ್ನು ಕೆಡವುತ್ತಿದ್ದಾರೆ ಅಥವಾ ಕಿತ್ತುಕೊಳ್ಳುತ್ತಿದ್ದಾರೆ. ಈಗ ಅವರು ಫಡ್ನವಿಸ್ ಜೊತೆಗೂಡಿ ಪಂಢರಪುರದ ಪವಿತ್ರ ಕ್ಷೇತ್ರಗಳನ್ನು ನಾಶಮಾಡಲು ಯೋಜಿಸುತ್ತಿದ್ದಾರೆ. ಹಾಗಾಗಿ ಈ ಹತ್ಯಾಕಾಂಡವನ್ನು ತಡೆಯಲು ನಾನು ಶೀಘ್ರದಲ್ಲೇ ಮುಂಬೈನ ಹೈಕೋರ್ಟ್ ಅನ್ನು ಸಂಪರ್ಕಿಸುತ್ತಿದ್ದೇನೆ. “ ಎಂದು ಸ್ವಾಮಿ ಟ್ವೀಟ್‌ನಲ್ಲಿ ಬರೆದಿದ್ದಾರೆ.

Similar News