ಬ್ರಿಟನ್, ಜರ್ಮನಿ ರಾಯಭಾರಿಗಳಿಗೆ ಇರಾನ್ ಸಮನ್ಸ್

Update: 2022-12-10 17:44 GMT

ಟೆಹ್ರಾನ್, ಡಿ.10: ಇರಾನ್‍ನಲ್ಲಿ ನಡೆಯುತ್ತಿರುವ ಹಿಜಾಬ್ ವಿರೋಧಿ ಪ್ರತಿಭಟನೆಯನ್ನು ಪ್ರೋತ್ಸಾಹಿಸುವ ಹೇಳಿಕೆ ನೀಡಿರುವ ಹಿನ್ನೆಲೆಯಲ್ಲಿ ಬ್ರಿಟನ್ ಮತ್ತು ಜರ್ಮನಿಯ ರಾಯಭಾರಿಗಳಿಗೆ ಸಮನ್ಸ್ ನೀಡಲಾಗಿದೆ ಎಂದು ಇರಾನ್‍ನ ವಿದೇಶಾಂಗ ಇಲಾಖೆ ಹೇಳಿದೆ.

ಪ್ರತಿಭಟನೆ ಆರಂಭವಾದ ಬಳಿಕದ 3 ತಿಂಗಳಲ್ಲಿ ಇರಾನ್‍ನ ವಿದೇಶಾಂಗ ಇಲಾಖೆ 15ನೇ ಬಾರಿ ವಿದೇಶದ ರಾಯಭಾರಿಗೆ ಸಮನ್ಸ್ ನೀಡಿದೆ . ಇರಾನ್ ವಿರುದ್ಧದ ಅಸಾಮಾನ್ಯ ಒತ್ತಡ ತಂತ್ರಕ್ಕೆ ಇದು ನಮ್ಮ ರಾಜತಾಂತ್ರಿಕ ರೀತಿಯ ಉತ್ತರವಾಗಿದೆ ಎಂದು ಸರಕಾರಿ ಸ್ವಾಮ್ಯದ ಇರ್ನಾ ಸುದ್ಧಿ ಸಂಸ್ಥೆ  ವರದಿ ಮಾಡಿದೆ. 

ಇರಾನ್ ವಿರುದ್ಧ ಬ್ರಿಟನ್ ವಿಧಿಸಿರುವ ನಿರ್ಬಂಧ ಕ್ರಮಗಳು ಹಾಗೂ ಆ ದೇಶ ಇರಾನ್‍ನಲ್ಲಿ ನಡೆಯುತ್ತಿರುವ `ಭಯೋತ್ಪಾದಕ ಕೃತ್ಯ ಮತ್ತು ಗೊಂದಲ'ಕ್ಕೆ ಪ್ರೋತ್ಸಾಹ ನೀಡುವುದನ್ನು ಖಂಡಿಸಿ ಪ್ರತಿಭಟನೆ ಸಲ್ಲಿಸಲಾಗಿದೆ ಎಂದು ಇರಾನ್ ಅಧಿಕಾರಿಗಳು ಹೇಳಿದ್ದಾರೆ. ಕಳೆದ 3 ತಿಂಗಳಲ್ಲಿ ಬ್ರಿಟನ್‍ನ ರಾಯಭಾರಿಗೆ 5  ಬಾರಿ, ಜರ್ಮನಿ ರಾಯಭಾರಿಗೆ 4 ಬಾರಿ ಸಮನ್ಸ್ ನೀಡಲಾಗಿದೆ. 

Similar News