×
Ad

ನಾಗ್ಪುರ ಮೆಟ್ರೋ ರೈಲು ಯೋಜನೆ, ವಂದೇ ಭಾರತ್ ರೈಲು ಉದ್ಘಾಟಿಸಿದ ಪ್ರಧಾನಿ ಮೋದಿ

Update: 2022-12-11 11:15 IST

ನಾಗ್ಪುರ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ನಾಗ್ಪುರ ಮೆಟ್ರೋ ರೈಲು ಯೋಜನೆಯ ಮೊದಲ ಹಂತವನ್ನು ರವಿವಾರ ಉದ್ಘಾಟಿಸಿದರು. ಫ್ರೀಡಂ ಪಾರ್ಕ್‌ನಿಂದ ಖಾಪ್ರಿವರೆಗೆ ಮೆಟ್ರೋದಲ್ಲಿ ಸವಾರಿ ಮಾಡಲು ಟಿಕೆಟ್ ಖರೀದಿಸಿದರು.

6700 ಕೋಟಿ ರೂ.ಗೂ ಹೆಚ್ಚು ವೆಚ್ಚದಲ್ಲಿ ಅಭಿವೃದ್ಧಿಪಡಿಸಲಿರುವ ರೈಲು ಯೋಜನೆಯ ಎರಡನೇ ಹಂತಕ್ಕೆ ಪ್ರಧಾನಿ ಮೋದಿ ಶಂಕುಸ್ಥಾಪನೆ ಮಾಡಿದರು.

ಫ್ರೀಡಂ ಪಾರ್ಕ್‌ನಿಂದ ಖಾಪ್ರಿಯವರೆಗಿನ ಪ್ರಯಾಣದ ಸಮಯದಲ್ಲಿ, ಪ್ರಧಾನಿಯವರು ವಿದ್ಯಾರ್ಥಿಗಳು ಹಾಗೂ  ಪ್ರಯಾಣಿಕರೊಂದಿಗೆ ಸಂವಾದ ನಡೆಸುತ್ತಿರುವುದು ಕಂಡುಬಂತು.

ಇಂದು ಮುಂಜಾನೆ, ಪ್ರಧಾನಿ ನರೇಂದ್ರ ಮೋದಿ ಅವರು ಮಹಾರಾಷ್ಟ್ರದ ನಾಗ್ಪುರ ಹಾಗೂ ಛತ್ತೀಸ್‌ಗಢದ ಬಿಲಾಸ್‌ಪುರ ನಡುವೆ ಚಲಿಸುವ ಆರನೇ ವಂದೇ ಭಾರತ್ ಎಕ್ಸ್‌ಪ್ರೆಸ್‌ಗೆ ಚಾಲನೆ ನೀಡಿದರು.

ರೈಲಿಗೆ ಚಾಲನೆ  ಮಾಡಿದ ನಂತರ ಪ್ರಧಾನಿ ಮೋದಿ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರತ್ತ ಕೈ ಬೀಸಿದರು.

ಪ್ರಧಾನಿ ಮೋದಿಯವರು ಚಾಲನೆ ನೀಡಿದ  ಆರನೇ ವಂದೇ ಭಾರತ್ ಎಕ್ಸ್‌ಪ್ರೆಸ್ ಇದಾಗಿದೆ.

Similar News