×
Ad

ಶ್ರೀಲಂಕಾ: ಮಾಂಸ ಸಾಗಣೆ ನಿಷೇಧ

Update: 2022-12-11 22:58 IST

ಕೊಲಂಬೊ, ಡಿ.11: ಉತ್ತರ ಮತ್ತು ಪೂರ್ವ ಪ್ರಾಂತದಲ್ಲಿ ಅಸಾಮಾನ್ಯ ಚಳಿಯ ವಾತಾವರಣ ಮುಂದುವರಿದಿದ್ದು ಕಳೆದ 2 ದಿನದಿಂದ ಬೃಹತ್ ಪ್ರಮಾಣದಲ್ಲಿ ದನಗಳು ಹಾಗೂ ಮೇಕೆಗಳು ಸತ್ತಿರುವುದರಿಂದ ಜಿಲ್ಲಾ ಮತ್ತು ಪ್ರಾಂತೀಯ ಹಂತದಲ್ಲಿ ಗೋಮಾಂಸ ಹಾಗೂ ಮಾಂಸ ಸಾಗಣೆಯನ್ನು ನಿಷೇಧಿಸಲಾಗಿದೆ ಎಂದು ಶ್ರೀಲಂಕಾ ಅಧಿಕಾರಿಗಳು ಹೇಳಿದ್ದಾರೆ.

ಹವಾಮಾನ ವೈಪರೀತ್ಯದ ಸಮಸ್ಯೆಯಿಂದಾಗಿ ಉತ್ತರ ಪ್ರಾಂತದಲ್ಲಿ 358 ಹಸು ಹಾಗೂ 191 ಮೇಕೆಗಳು, ಪೂರ್ವ ಪ್ರಾಂತದಲ್ಲಿ 444 ಹಸುಗಳು, 34 ಎಮ್ಮೆಗಳು ಹಾಗೂ 65 ಮೇಕೆಗಳು ಸತ್ತಿವೆ. ಮೃತಪಟ್ಟ ಪ್ರಾಣಿಗಳ ಮಾದರಿಯನ್ನು ಪಶುವೈದ್ಯಕೀಯ ಪ್ರಯೋಗಾಲಯದಲ್ಲಿ ಪರೀಕ್ಷೆ ನಡೆಸಲಾಗುವುದು. ಸಾರ್ವಜನಿಕ ಆರೋಗ್ಯ ಸುರಕ್ಷತೆಯ ದೃಷ್ಟಿಯಿಂದ ಅಧ್ಯಕ್ಷ ರನಿಲ್ ವಿಕ್ರಮಸಿಂಘೆ ಮಾಂಸ ಸಾಗಣೆ ನಿಷೇಧಕ್ಕೆ ಆದೇಶಿಸಿದ್ದಾರೆ ಎಂದು ಅಧಿಕಾರಿಗಳನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ.

Similar News