ರಶ್ಯ ಆಕ್ರಮಿತ ನಗರದ ಮೇಲೆ ಉಕ್ರೇನ್ ದಾಳಿ; ಇಬ್ಬರು ಮೃತ್ಯು

Update: 2022-12-12 18:06 GMT

ಕೀವ್, ಡಿ.12: ರಶ್ಯ ಆಕ್ರಮಿಸಿಕೊಂಡಿರುವ ದಕ್ಷಿಣದ ನಗರ ಮೆಲಿಟೊಪೊಲ್ (Melitopol)ಮೇಲೆ ಶನಿವಾರ ಉಕ್ರೇನ್(Ukraine) ಪಡೆ ದಾಳಿ ನಡೆಸಿದ್ದು ಇಬ್ಬರು ಸಾವನ್ನಪ್ಪಿದ್ದಾರೆ  ಎಂದು ನಗರದಲ್ಲಿ ರಶ್ಯ ನೇಮಿಸಿರುವ ಆಡಳಿತಾಧಿಕಾರಿಯನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ.

ಉಕ್ರೇನ್‍ನ ದಕ್ಷಿಣದಲ್ಲಿರುವ  ಝಪೋರಿಝಿ(Zaporizhia)ಯಾದ ಬಳಿಯಿರುವ ಆಯಕಟ್ಟಿನ  ಮೆಲಿಟೊಪೊಲ್ ನಗರವನ್ನು  ಯುದ್ಧ ಆರಂಭಗೊಂಡ ಕೆಲವೇ ದಿನಗಳಲ್ಲಿ ರಶ್ಯ ಆಕ್ರಮಿಸಿಕೊಂಡು ಇಲ್ಲಿ ಆಡಳಿತಾಧಿಕಾರಿಯನ್ನು ನೇಮಿಸಿದೆ. ಅಮೆರಿಕ ಒದಗಿಸಿದ `ಹಿಮರಸ್' (Himarus)ದೀರ್ಘವ್ಯಾಪ್ತಿಯ ರಾಕೆಟ್ ಲಾಂಚರ್ ಬಳಸಿ ಉಕ್ರೇನ್ ಪಡೆ ರಾತ್ರಿ ಸುಮಾರು 9 ಗಂಟೆಗೆ ರಾಕೆಟ್ ದಾಳಿ ನಡೆಸಿದೆ ಎಂದು ರಶ್ಯದ ಅಧಿಕಾರಿ ಯೆವ್ಗಿನಿ ಬಲಿಟ್ಸ್ಕಿ ಹೇಳಿದ್ದಾರೆ.

ನಗರದ ಹೊರವಲಯದ ಮನೋರಂಜನಾ ಕೇಂದ್ರಕ್ಕೆ ರಾಕೆಟ್ ಅಪ್ಪಳಿಸಿದ್ದು ಕೇಂದ್ರಕ್ಕೆ ಹಾನಿಯಾಗಿದೆ. ಇಬ್ಬರು ಮೃತಪಟ್ಟಿದ್ದು 10 ಮಂದಿ ಗಾಯಗೊಂಡಿದ್ದಾರೆ ಎಂದವರು ಮಾಹಿತಿ ನೀಡಿದ್ದಾರೆ.   

Similar News