ಜನನ ದರ ಸುಧಾರಣೆಗಾಗಿ ಪ್ರತಿ ಪ್ರಜೆಗೆ ರೂ. 48,000 ಹೆಚ್ಚುವರಿ ಹಣ ನೀಡಲು ಮುಂದಾದ ಜಪಾನ್

Update: 2022-12-13 13:19 GMT

ಟೋಕಿಯೊ: ಇತ್ತೀಚಿನ ವರ್ಷಗಳಲ್ಲಿ ಜಪಾನ್‌ನಲ್ಲಿ (Japan) ಜನನ ದರ ಗಣನೀಯ ಇಳಿಕೆ ಕಾಣುತ್ತಿದೆ. ಹೀಗಾಗಿ ಜನರು ತಮ್ಮ ಕುಟುಂಬದಲ್ಲಿ ಮಗುವನ್ನು ಹೊಂದಲು ಅನುಕೂಲವಾಗಲು ಅವರಿಗೆ ಹೆಚ್ಚುವರಿ ಹಣ ಒದಗಿಸುವ ಭರವಸೆಯನ್ನು ಜಪಾನ್ ದೇಶದ ಆರೋಗ್ಯ, ಕಾರ್ಮಿಕ ಹಾಗೂ ಕಲ್ಯಾಣ ಸಚಿವಾಲಯ ನೀಡಿದೆ ಎಂದು Japan Today ವರದಿ ಮಾಡಿದೆ.

ಸದ್ಯ, ಹೊಸ ಪೋಷಕರಿಗೆ ಒಟ್ಟಾರೆ 420000 ಯೆನ್ (ರೂ. Rs 2,52,338) ಶಿಶು ಜನನ ಮತ್ತು ಶಿಶು ಆರೈಕೆ ಅನುದಾನ ನೀಡಲಾಗುತ್ತಿದೆ. ಈ ಮೊತ್ತವನ್ನು 500000 ಯೆನ್ (ರೂ. 3,00,402)ಗೆ ಏರಿಸುವ ಆಶಯವನ್ನು ಆರೋಗ್ಯ, ಕಾರ್ಮಿಕ ಮತ್ತು ಕಲ್ಯಾಣ ಸಚಿವ ಕತ್ಸುನೊಬು ಕಾಟೊ ವ್ಯಕ್ತಪಡಿಸಿದ್ದಾರೆ. ಈ ಕುರಿತು ಕಳೆದ ವಾರ ಕಾಟೊ, ಪ್ರಧಾನಿ ಫುಮಿಯೊ ಕಿಷಿದ ಅವರೊಂದಿಗೆ ಯೋಜನೆಯ ಕುರಿತು ಚರ್ಚಿಸಿದ್ದು, ಬಹುತೇಕ ಒಪ್ಪಿಗೆ ದೊರೆಯುವ ಸಾಧ್ಯತೆ ಇದೆ. ಈ ಯೋಜನೆಯು 2023ರ ಆರ್ಥಿಕ ವರ್ಷದಿಂದ ಜಾರಿಗೆ ಬರಲಿದೆ ಎಂದು ಜಪಾನ್ ಟುಡೆ ವರದಿ ಮಾಡಿದೆ.

ಅನುದಾನ ಪ್ರಮಾಣದಲ್ಲಿ ಈ ಮಟ್ಟದ ಏರಿಕೆ ಮಾಡಿದರೂ ಯಾರನ್ನೂ ಮಕ್ಕಳನ್ನು ಹೊಂದುವಂತೆ ಪ್ರೇರೇಪಿಸಲು ಸಾಧ್ಯವಿಲ್ಲ. ಅಲ್ಲದೆ ಈ ಭತ್ಯೆಯು ಅಷ್ಟು ಪರಿಣಾಮಕಾರಿಯೂ ಅಲ್ಲ. ಅನುದಾನವನ್ನು "ಶಿಶು ಜನನ ಮತ್ತು ಶಿಶು ಆರೈಕೆಗಾಗಿ ಒಟ್ಟಾರೆ ಅನುದಾನ" ಎಂದು ಕರೆಯಲಾಗಿದ್ದರೂ ಮತ್ತು ಜಪಾನ್ ಸಾರ್ವಜನಿಕ ಆರೋಗ್ಯ ವಿಮೆ ವ್ಯವಸ್ಥೆಯ ನೆರವು ಪಡೆದಿದ್ದರೂ ಮಗುವಿನ ಹೆರಿಗೆ ಶುಲ್ಕವನ್ನು ಪೋಷಕರು ತಮ್ಮ ಜೇಬಿನಿಂದಲೇ ಭರಿಸಬೇಕಾಗುತ್ತದೆ. ಜಪಾನ್‌ನಲ್ಲಿ ಹೆರಿಗಾಗಿ ಭರಿಸಬೇಕಾದ ಶುಲ್ಕವು ಸುಮಾರು 473000 ಯೆನ್‌ಗಳಷ್ಟಿದೆ. ಒಂದು ವೇಳೆ ಅನುದಾನವನ್ನು ಏರಿಕೆ ಮಾಡಿದರೂ ಹೆರಿಗೆಯ ನಂತರ ಮನೆಗೆ ಮರಳುವಾಗುವ ಪೋಷಕರ ಬಳಿ ಸರಾಸರಿ 30000 ಯೆನ್ ಮಾತ್ರ ಉಳಿಯಲಿದೆ ಎಂದು ಅದು ವರದಿ ಮಾಡಿದೆ.

ಇದನ್ನೂ ಓದಿ: 7 ವರ್ಷಗಳ ಹಿಂದೆ 'ಕೊಲೆಯಾದ' ಪತ್ನಿ ಜೀವಂತ ಪತ್ತೆ: ಮಾಡದ ತಪ್ಪಿಗೆ ವರ್ಷಗಳ ಕಾಲ ಜೈಲಿನಲ್ಲಿ ಕಾಲಕಳೆದ ಪತಿ!

Similar News