‘ಮಾಸ್ಟರ್ ಫ್ಲ್ಯಾನ್’ದೊಂದಿಗೆ ಗೆಲುವು ಸಾಧಿಸುವ ಪಣ: ಮಂಜುನಾಥ್ ಭಂಡಾರಿ
ಕುಂದಾಪುರ : ಚುನಾವಣೆಯಲ್ಲಿ ಹೈಕಮಾಂಡ್ ಸೂಚಿಸಿದ ಯಾರೇ ಅಭ್ಯರ್ಥಿಯಾದರೂ ಕೂಡ ಒಗ್ಗಟ್ಟಾಗಿ ಕೆಲಸ ಮಾಡಬೇಕು. ಚುನಾವಣೆಯಲ್ಲಿ ಮುಂಚಿತ ಪೂರ್ವ ತಯಾರಿಯೊಂದಿಗೆ ‘ಮಾಸ್ಟರ್ ಫ್ಲ್ಯಾನ್’ ಮಾಡಿ ಗೆಲುವು ಸಾಧಿಸುವ ಪಣ ತೊಡಬೇಕು ಎಂದು ವಿಧಾನಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಹೇಳಿದ್ದಾರೆ.
ತೆಕ್ಕಟ್ಟೆ ದುರ್ಗಾಪರಮೇಶ್ವರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಕುಂದಾ ಪುರ ಬ್ಲಾಕ್ ಕಾಂಗ್ರೆಸ್ ಬೀಜಾಡಿ ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಸ್ಥಳೀಯಾ ಡಳಿತ ಪ್ರತಿನಿಧಿಗಳು, ಕಾರ್ಯಕರ್ತರ ಭೇಟಿ ಕಾರ್ಯಕ್ರಮದಲ್ಲಿ ಅವರು ಮಾತನಾಡುತಿದ್ದರು.
ಗ್ರಾಪಂ ಚುನಾವಣೆಯಲ್ಲಿ ಸರ್ಧಿಸಿ ಗೆಲ್ಲುವುದು ಸುಲಭದ ಕೆಲಸವಲ್ಲ. ಯಾಕೆಂದರೆ ಸ್ಪರ್ಧಿಯ ಜಾತಕ ಜನರ ಬಳಿಯೇ ಇರುತ್ತದೆ. ಜನರೊಂದಿಗೆ ಇದ್ದು ಅವರಿಗೆ ಸ್ಪಂದನೆ ಮಾಡಿದರೆ ಮಾತ್ರ ಜನರು ಗೆಲ್ಲಿಸುತ್ತಾರೆ. ಚುನಾವಣೆ ಹಿನ್ನೆಲೆ ಗ್ರಾಪಂ ಮಟ್ಟದಲ್ಲಿ ಸಮಿತಿ ಮಾಡಿ ಪಕ್ಷ ಬಲವರ್ಧನೆಗೆ ಮುಂದಾಗ ಬೇಕು. ಬಹಳಷ್ಟು ವ್ಯಾಪ್ತಿಯಲ್ಲಿ ಕಾಂಗ್ರೆಸ್ ಪಕ್ಷವು ಬಿಜೆಪಿಗೆ ಸರಿ ಸಮನಾದ ಪೈಪೋಟಿ ನೀಡುತ್ತಿದೆ. ಮುಂದೆಯೂ ಕೂಡ ಬೂತ್, ಬ್ಲಾಕ್ ಮಟ್ಟದಲ್ಲಿ ಸಕ್ರೀಯವಾಗುವ ಅಗತ್ಯವಿದೆ ಎಂದರು.
ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಬೀಜಾಡಿ ಗ್ರಾಪಂ ಸದಸ್ಯ ಶೇಖರ್ ಚಾತ್ರಬೆಟ್ಟು, ಕಾಳಾವರ ಗ್ರಾಪಂ ಸದಸ್ಯ ರಮೇಶ್ ಶೆಟ್ಟಿ ವಕ್ವಾಡಿ ಮಾತನಾಡಿದರು.
ಕುಂದಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹರಿಪ್ರಸಾದ್ ಶೆಟ್ಟಿ ಕಾನ್ಮಕ್ಕಿ, ಹಿರಿಯ ಮುಖಂಡರಾದ ಮಲ್ಯಾಡಿ ಶಿವರಾಮ ಶೆಟ್ಟಿ, ಪ್ರಸನ್ನ ಕುಮಾರ್ ಶೆಟ್ಟಿ ಕೆರಾಡಿ, ತೆಕ್ಕಟ್ಟೆ ಗ್ರಾಪಂ ಅಧ್ಯಕ್ಷೆ ಮಮತಾ ದೇವಾಡಿಗ, ಕೆದೂರು ಗ್ರಾಪಂ ಅಧ್ಯಕ್ಷೆ ಆಶಲತಾ ಶೆಟ್ಟಿ, ಕ್ಷೇತ್ರದ ಸ್ಪರ್ಧೆಯ ಆಕಾಂಕ್ಷಿಗಳಾದ ದಿನೇಶ್ ಹೆಗ್ಡೆ ಮೊಳಹಳ್ಳಿ, ಕಿಶನ್ ಹೆಗ್ಡೆ ಕೊಳ್ಕೆಬೈಲು, ಅಶೋಕ್ ಪೂಜಾರಿ ಬೀಜಾಡಿ, ಶ್ಯಾಮಲಾ ಭಂಡಾರಿ ಉಪಸ್ಥಿತರಿದ್ದರು.
ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ಆಶಾ ಕರ್ವಲ್ಲೋ ಕಾರ್ಯಕ್ರಮ ನಿರೂಪಿಸಿದರು. ಮಲ್ಯಾಡಿ ಶಿವರಾಮ ಶೆಟ್ಟಿ ಸ್ವಾಗತಿಸಿದರು. ವಿಜಯ್ ಭಂಡಾರಿ ವಂದಿಸಿದರು.
‘ಬಿಜೆಪಿ ವಾಮಮಾರ್ಗದ ಸಂಚು ವಿಫಲಗೊಳಿಸಿ’
ರಾಜಕೀಯದಲ್ಲಿ ನಮಗೆ ನಾವೇ ಲೀಡರ್ ಆಗಬೇಕು. ಕಾರ್ಯಕರ್ತರನ್ನು, ಪದಾಧಿಕಾರಿಗಳನ್ನು ಒಗ್ಗೂಡಿಸಿ ಕೊಂಡು ಕೆಲಸ ನಿರ್ವಹಿಸಬೇಕು. ಚುನಾವಣೆ ಗೆಲ್ಲಲು ಅನ್ಯ ಪಕ್ಷದವರು ವಾಮಮಾರ್ಗದ ಸಂಚು ಹೂಡುವಾಗ ಆ ಸಂಚು ವಿಫಲಗೊಳಿಸಿ ಜನರಿಗೆ ನಿಜಾಂಶ ತಿಳಿಸಬೇಕಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಹೇಳಿದರು.
ಕುಂಭಾಶಿಯಲ್ಲಿ ಮಂಗಳವಾರ ನಡೆದ ಕುಂದಾಪುರ ವಿಧಾನಸಭಾ ಕ್ಷೇತ್ರದ ಕೋಟ ಹಾಗೂ ಕುಂದಾಪುರ ಬ್ಲಾಕ್ ಕಾಂಗ್ರೆಸ್ ವ್ಯಾಪ್ತಿಯ ಮತದಾರರ ಪಟ್ಟಿ ಪರಿಷ್ಕರಣೆ ಹಾಗೂ ಬೂತ್ ಮಟ್ಟದಲ್ಲಿ ಮಾಹಿತಿ ನೀಡಲು ನೇಮಿಸಿರುವ ಸಂಯೋಜಕರ ಜೊತೆ ಸಂವಾದದಲ್ಲಿ ಅವರು ಮಾತನಾಡುತಿದ್ದರು.
ಉಡುಪಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ರಾಜ್ಯ ಯುವ ಕಾಂಗ್ರೆಸ್ ಕಾರ್ಯದರ್ಶಿ ಅಜಿತ್ ಕುಮಾರ್ ಶೆಟ್ಟಿ, ಜಿಲ್ಲಾ ಕಾಂಗ್ರೆಸ್ ಉಸ್ತುವಾರಿ ಪ್ರಸನ್ನ ಕುಮಾರ್ ಶೆಟ್ಟಿ ಕೆರಾಡಿ, ಕುಂದಾಪುರ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಮಲ್ಯಾಡಿ ಶಿವರಾಮ ಶೆಟ್ಟಿ, ಮುಖಂಡರಾದ ಕಿಶನ್ ಹೆಗ್ಡೆ ಕೊಳ್ಕೆಬೈಲ್, ದಿನೇಶ್ ಹೆಗ್ಡೆ ಮೊಳಹಳ್ಳಿ, ಶ್ಯಾಮಲಾ ಭಂಡಾರಿ, ವಿಕಾಸ್ ಹೆಗ್ಡೆ ಉಪಸ್ಥಿತರಿದ್ದರು. ರಾಕೇಶ್ ಶೆಟ್ಟಿ ವಕ್ವಾಡಿ ಕಾರ್ಯಕ್ರಮ ನಿರೂಪಿಸಿದರು.