ಜಯಮೊಲ್ ಪಿ.ಎಸ್.ಗೆ ಡಾಕ್ಟರೇಟ್
Update: 2022-12-13 20:42 IST
ಉಡುಪಿ, ಡಿ.13: ಉಡುಪಿ ವೈಕುಂಠ ಬಾಳಿಗಾ ಕಾನೂನು ಮಹಾ ವಿದ್ಯಾಲಯದ ಸಹಾಯಕ ಪ್ರಾಧ್ಯಾಪಕಿ ಜಯಮೊಲ್ ಪಿ.ಎಸ್ ಇವರು ಮಂಡಿಸಿದ ಮಹಾಪ್ರಬಂಧಕ್ಕೆ ಹುಬ್ಬಳ್ಳಿಯ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ ಪಿಎಚ್‌ಡಿ ಪದವಿ ನೀಡಿ ಗೌರವಿಸಿದೆ.
ಜಯಮೊಲ್ ಅವರು ಕಾನೂನು ವಿಷಯದಲ್ಲಿ ಮಂಡಿಸಿದ ‘ಆ್ಯನ್ ಇವ್ಯಾಲ್ಯುವೇಷನ್ ಆಫ್ ದಿ ಎನ್ಫೋರ್ಸ್‌ಮೆಂಟ್ ಮೆಕ್ಯಾನಿಸಮ್ ಅಂಡರ್ ದಿ ಫುಡ್ ಸೇಫ್ಟಿ ಆ್ಯಂಡ್ ಸ್ಟ್ಯಾಂಡರ್ಡ್ ಆ್ಯಕ್ಟ್ 2006 ಇನ್ ಎನ್‌ಶ್ಯೂರಿಂಗ್ ಸೇಫ್ ಆ್ಯಂಡ್ ಹೋಲ್ಸ್‌ಮ್ ಫುಡ್’ ಎಂಬ ವಿಷಯದಲ್ಲಿ ಮಂಡಿಸಿದ ಮಹಾಪ್ರಬಂಧಕ್ಕೆ ಡಾಕ್ಟರೇಟ್ ಪದವಿ ನೀಡಲಾಗಿದೆ.
ಇವರು ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಡಾ.ಡಿ.ರಂಗಸ್ವಾಮಿ ಇವರ ಮಾರ್ಗದರ್ಶನದಲ್ಲಿ ಮಹಾಪ್ರಬಂಧವನ್ನು ಮಂಡಿಸಿದ್ದರು. ಜಯಮೊಲ್ ಇವರನ್ನು ಕಾಲೇಜಿನ ಆಡಳಿತ ಮಂಡಳಿ ಹಾಗೂ ಪ್ರಾಂಶುಪಾಲರು ಅಭಿನಂದಿಸಿದೆ.