ಉಡುಪಿ : ಮನೆಗೆ ನುಗ್ಗಿ ಚಿನ್ನಾಭರಣ ಕಳವು

Update: 2022-12-13 16:04 GMT

ಉಡುಪಿ, ಡಿ.13: ಮನೆಯೊಂದಕ್ಕೆ ನುಗ್ಗಿದ ಕಳ್ಳರು ಲಕ್ಷಾಂತರ ರೂ. ಮೌಲ್ಯದ ಸೊತ್ತುಗಳನ್ನು ಕಳವು ಮಾಡಿರುವ ಘಟನೆ ಕುಂಜಿಬೆಟ್ಟು ಎಂಬಲ್ಲಿ ಡಿ.11ರಂದು ರಾತ್ರಿ ವೇಳೆ ನಡೆದಿದೆ.

ವೈಷ್ಣವಿ ಆಚಾರ್ಯ ಎಂಬವರ ಮನೆಯ ಹಿಂಬಾಗಿಲಿನ ಮೂಲಕ ಒಳ ಪ್ರವೇಶಿಸಿದ ಕಳ್ಳರು, ಕಪಾಟಿನಲ್ಲಿದ್ದ ಡೈಮಂಡ್ ಉಂಗುರ, ೨ ಚಿನ್ನದ ಜುಮುಕಿ, ಚಿನ್ನದ ಕಾಯಿನ್, 2 ಬೆಳ್ಳಿಯ ತಟ್ಟೆಗಳು, ಚಿನ್ನದ ಲೇಪನ ಇರುವ ಆಭರಣ ಗಳನ್ನು ಕಳವು ಮಾಡಿಕೊಂಡು ಹೋಗಿದ್ದಾರೆ. ಇವುಗಳ ಒಟ್ಟು ಮೌಲ್ಯ 3,48,000ರೂ. ಎಂದು ಅಂದಾಜಿಸಲಾಗಿದೆ.

ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Similar News