×
Ad

ಭಟ್ಕಳ | ಬೈಕ್ ಲಾರಿ ನಡುವೆ ಅಪಘಾತ; ಇಬ್ಬರು ಯುವಕರು ಸ್ಥಳದಲ್ಲೇ ಮೃತ್ಯು

Update: 2022-12-15 14:05 IST

ಭಟ್ಕಳ: ಇಲ್ಲಿನ ರಾ.ಹೆ.66ರ ಮೂಡ್‍ಭಟ್ಕಳ ಬೈಪಾಸ್ ಬಳಿ ಬೈಕ್ ಮತ್ತು ಲಾರಿ ನಡುವೆ ಢಿಕ್ಕಿ ಸಂಭವಿಸಿ ಬೈಕ್ ನಲ್ಲಿದ್ದ ಇಬ್ಬರು ಸವಾರರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಬುಧವಾರ ತಡರಾತ್ರಿ ಸಂಭವಿಸಿದೆ. 

ಅಪಘಾತದಲ್ಲಿ ಸಾವಿಗೀಡಾದವರನ್ನು ತಲಾಂದಸಬ್ಬತ್ತಿ ನಿವಾಸಿ ಶೇಖರ್ ಸುಬ್ರಮಣ್ಯ ನಾಯ್ಕ (25) ಹಾಗೂ ಲೋಕೇಶ್ ಮಂಜುನಾಥ್ ನಾಯ್ಕ (30)ಎಂದುಗುರುತಿಸಲಾಗಿದೆ. 

ಬೈಕ್ ನಲ್ಲಿ ಪ್ರಯಾಣಿಸುತ್ತಿದ್ದ ಯುವಕರಿಬ್ಬರು ನಗರದ ಹೋಟೆಲ್‍ ಒಂದರಲ್ಲಿ ಕೆಲಸ ಮಾಡುತ್ತಿದ್ದು, ಊಟ ಮುಗಿಸಿ ಹೋಟೆಲ್ ನಲ್ಲಿ ವಿಶ್ರಾಂತಿ ಪಡೆಯಲು ಶಂಶುದ್ದೀನ್ ಸರ್ಕಲ್ ಗೆ ಹೋಗುತ್ತಿದ್ದ ವೇಳೆ ಮೂಡ್‍ ಭಟ್ಕಳ ಬೈಪಾಸ್ ಬಳಿ ರಾತ್ರಿ 12.30ರ ಸುಮಾರಿಗೆ ಈ ಅಪಘಾತ ಸಂಭವಿಸಿದೆ ಎಂದು ಹೇಳಲಾಗುತ್ತಿದೆ. ಅಪಘಾತದ ತೀವ್ರತೆಗೆ ಲಾರಿ ಪಲ್ಟಿಯಾಗಿದ್ದು, ಬೈಕ್ ಜಖಂಗೊಂಡಿದೆ.   

Similar News