×
Ad

ಕೆರೆಯಲ್ಲಿ ಮುಳುಗಿ ಕಾಸರಗೋಡಿನ ವಿದ್ಯಾರ್ಥಿ ಮೃತ್ಯು

Update: 2022-12-15 18:19 IST

ಕಾಸರಗೋಡು:  ತಮಿಳುನಾಡಿನ ಏರ್ವಾಡಿಗೆ ತೆರಳಿದ್ದ ಪೈವಳಿಕೆಯ ವಿದ್ಯಾರ್ಥಿಯೋರ್ವ ಕೆರೆಯಲ್ಲಿ ಮುಳುಗಿ ಮೃತಪಟ್ಟ ಘಟನೆ  ನಡೆದಿದೆ.

ಪೈವಳಿಕೆ ದೇವಕ್ಕಾನದ  ಮುಹಮ್ಮದ್ ಹನೀಫ್ ಹಾಜಿ ಎಂಬವರ ಪುತ್ರ ಅನ್ಸಾಫ್ (18) ಮೃತಪಟ್ಟ ವಿದ್ಯಾರ್ಥಿ.

ಏರ್ವಾಡಿ ಮುತ್ತುಪೇಟೆ ಕೆರೆಯಲ್ಲಿ ಮುಳುಗಿ ಮೃತಪಟ್ಟಿರುವುದಾಗಿ ತಿಳಿದುಬಂದಿದೆ.

ಮೂರು ದಿನಗಳ ಹಿಂದೆ  ಅನ್ಸಾಫ್ ಸೇರಿದಂತೆ ಸುಮಾರು 50 ವಿದ್ಯಾರ್ಥಿಗಳು ತಮಿಳುನಾಡಿನ ವಿವಿಧ ಸ್ಥಳಗಳಿಗೆ ಝಿಯಾರತ್ ಗಾಗಿ ತೆರಳಿದ್ದರು. ಗುರುವಾರ ಬೆಳಗ್ಗೆ ಇತರ ವಿದ್ಯಾರ್ಥಿಗಳ ಜೊತೆ ಕೆರೆಯಲ್ಲಿ ಸ್ನಾನಕ್ಕಿಳಿದಾಗ ಅನ್ಸಾಫ್ ನೀರಿನಲ್ಲಿ ಮುಳುಗಿ ಮೃತಪಟ್ಟರು ಎಂದು ಇಲ್ಲಿನ ಪೊಲೀಸರು ತಿಳಿಸಿದ್ದಾರೆ. 

Similar News