ಕ್ರೀಡಾ ವಸತಿ ಶಾಲೆ ಪ್ರವೇಶಕ್ಕೆ ಕ್ರೀಡಾಪಟುಗಳ ಆಯ್ಕೆ
ಉಡುಪಿ, ಡಿ.15: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ವತಿಯಿಂದ 2023-24ನೇ ಶೈಕ್ಷಣಿಕ ಸಾಲಿನಲ್ಲಿ ಕ್ರೀಡಾ ವಸತಿ ಶಾಲೆ ಹಾಗೂ ನಿಲಯಗಳ ಪ್ರವೇಶಕ್ಕೆ 7ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಹಾಗೂ ಜೂನ್ 1ರಿಂದ 8ನೇ ತರಗತಿ ಪ್ರವೇಶಕ್ಕೆ ಅರ್ಹತೆ ಹೊಂದುವ 14 ವರ್ಷದೊಳಗಿನ ಬಾಲಕ ಹಾಗೂ ಬಾಲಕಿಯರ ಆಯ್ಕೆ ಪ್ರಕ್ರಿಯೆಯು ಈ ಕೆಳಕಂಡ ಸ್ಥಳಗಳಲ್ಲಿ ನಡೆಯಲಿದೆ.
ಡಿಸೆಂಬರ್ 21ರಂದು ಕುಂದಾಪುರ ಗಾಂಧಿ ಮೈದಾನ, ಡಿ.22ರಂದು ಬೈಂದೂರು ಸರಕಾರಿ ಜೂನಿಯರ್ ಕಾಲೇಜು ಎದುರಿನ ಗಾಂಧಿ ಮೈದಾನ, ಡಿ.23ರಂದು ಕಾರ್ಕಳ ಗಾಂಧಿ ಮೈದಾನ, ಡಿ.26ರಂದು ಹೆಜಮಾಡಿ ಕ್ರೀಡಾಂಗಣ, ಡಿ.27ರಂದು ಉಡುಪಿ ಜಿಲ್ಲಾ ಕ್ರೀಡಾಂಗಣ, ಡಿ.28ರಂದು ಬ್ರಹ್ಮಾವರ ಸರಕಾರಿ ಪದವಿ ಪೂರ್ವ ಕಾಲೇಜು ಮೈದಾನ ಹಾಗೂ ಡಿ.29 ರಂದು ಜಿಲ್ಲಾ ಮಟ್ಟದ ಆಯ್ಕೆ ಪ್ರಕ್ರಿಯೆಯು ಉಡುಪಿಯ ಜಿಲ್ಲಾ ಕ್ರೀಡಾಂಗಣದಲ್ಲಿ ಬೆಳಗ್ಗೆ 10 ರಿಂದ ನಡೆಯಲಿದೆ.
ಹಿರಿಯ ವಿಭಾಗದ ಕ್ರೀಡಾಪಟುಗಳ ಕ್ರೀಡಾ ವಸತಿ ನಿಲಯ ಪ್ರವೇಶಕ್ಕೆ ಜೂನ್ 1ಕ್ಕೆ 18 ವರ್ಷ ವಯೋಮಿತಿ ಒಳಗಿರುವ, 2005 ಜೂನ್ 1ರ ನಂತರ ಜನಿಸಿರುವ, ಪ್ರಥಮ ಪಿಯುಸಿ ಸೇರಲು ಅರ್ಹರಾಗಿರುವ ಕೀಡಾಪಟುಗಳನ್ನು ನೇರವಾಗಿ ವಿಭಾಗ ಮಟ್ಟದಲ್ಲಿಆಯ್ಕೆ ಮಾಡಲಾಗುವುದು.
ಹೆಚ್ಚಿನ ಮಾಹಿತಿಗಾಗಿ ಸಹಾಯಕ ನಿರ್ದೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಮಹಾತ್ಮಗಾಂಧಿ ಜಿಲ್ಲಾ ಕ್ರೀಡಾಂಗಣ, ಅಜ್ಜರಕಾಡು, ಉಡುಪಿ ದೂ.ಸಂ.:0820-2521324, ಅನಂತ್‌ರಾಮ್ ಮೊ.ನಂ: 9448984729ಅನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.