ರಾಷ್ಟ್ರಮಟ್ಟದ ಕರಾಟೆ ಸ್ಪರ್ಧೆ: ಎಂಇಟಿ ಸ್ಕೂಲ್‌ನ ವಿದ್ಯಾರ್ಥಿಗಳ ಸಾಧನೆ
Update: 2022-12-16 17:35 IST
ಉಡುಪಿ, ಡಿ.16: ಕೊಬುಡೋ ಬುಡುಕಾನ್ ಕರಾಟೆ ಡೊ ಅಸೋಸಿ ಯೇಷನ್ ಕರ್ನಾಟಕ ಇತ್ತೀಚೆಗೆ ಉಡುಪಿ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಸಿದ 5ನೆಯ ರಾಷ್ಟ್ರಮಟ್ಟದ ಸ್ಪರ್ಧಾಕೂಟದಲ್ಲಿ ಉದ್ಯಾವರ ಕೊರಂಗ್ರಪಾಡಿಯ ಎಂಇಟಿ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಹಲವು ಪದಕಗಳನ್ನು ಗೆದ್ದುಕೊಂಡಿದ್ದಾರೆ. 6 ವರ್ಷದ ಕೆಳಗಿನ ವಿಭಾಗದ ಕಟ ಮತ್ತು ಕುಮಿಟೆಯಲ್ಲಿ ಇನಾಯ ಇಬಾದ್, ಜೈನ ಫಾತಿಮಾ ಹಾಗೂ 7 ರಿಂದ 8 ವರ್ಷದ ವಿಭಾಗದಲ್ಲಿ ಉಲ್ಫಾ ಕತಿಜಾ, ಎಂ.ಝಿಹಾನ್ ಹಾಗೂ 9ರಿಂದ 10 ವರ್ಷದ ವಿಭಾಗದಲ್ಲಿ ಫೈಹ ನಫೀಸಾ, ಆತ್ಮೀ, ಮನ್ಹ ಫಾತಿಮಾ, ಎಂ.ಲುಕ್ಮಾನ್ ಹಾಗೂ 11ರಿಂದ 12 ವರ್ಷದ ವಿಭಾಗದಲ್ಲಿ ಎಂ.ಅಯಾನ್ ಪಲಾವ್ಕರ್, ಶೇಕ್ ರಿಹಾನ್, ಜಿಯಾನ್ ಆಜಾದಿ, ಅನುಶ್ರೀ ಹಾಗೂ 13 ವರ್ಷ ಮೇಲ್ಪಟ್ಟ ವಿಭಾಗದಲ್ಲಿ ಸಹಿದ್ ಪದಕ ಪಡೆದುಕೊಂಡರು. ಇವರನ್ನು ಎಂಇಟಿ ಆಂಗ್ಲ ಮಾಧ್ಯಮ ಶಾಲಾ ಸಂಸ್ಥಾಪಕ ಜಲೀಲ್ ಸಾಹೇಬ್, ಶಾಲಾ ಶೈಕ್ಷಣಿಕ ಮುಖ್ಯಸ್ಥೆ ಡಾ.ಜುನೈದ ಸುಲ್ತಾನ್, ಶಾಲಾ ಮುಖ್ಯೋಪಾಧ್ಯಾನಿ ಸವಿತಾ ಆಚಾರ್ಯ, ಕರಾಟೆ ಶಿಕ್ಷಕ ರವಿಕುಮಾರ್ ಉದ್ಯಾವರ ಹಾಗೂ ಶಾಲಾ ಆಡಳಿತ ಸಮಿತಿಯ ಎಲ್ಲಾ ಪದಾಧಿಕಾರಿಗಳು ಅಭಿನಂದಿಸಿದ್ದಾರೆ.