ಕೇಂಬ್ರಿಡ್ಜ್ ನಿಘಂಟಿನಲ್ಲಿ 'ಪುರುಷ', 'ಮಹಿಳೆ' ಪದದ ಅರ್ಥ ಪುನರ್ ವ್ಯಾಖ್ಯಾನ: ಇಲ್ಲಿದೆ ಮಾಹಿತಿ

Update: 2022-12-16 12:11 GMT

ಲಂಡನ್: ಜೈವಿಕ ಲಿಂಗ ಲಕ್ಷಣಗಳ ಬದಲು ಜನನದ ವೇಳೆಯಲ್ಲಿನ ಲಿಂಗವನ್ನು ಆಧರಿಸಿ ವ್ಯಕ್ತಿಗಳನ್ನು ವ್ಯಾಖ್ಯಾನಿಸುವ ಅರ್ಥ ವಿವರಣೆಯನ್ನು ಕೇಂಬ್ರಿಡ್ಜ್ ನಿಘಂಟಿನಲ್ಲಿ (Cambridge Dictionary) ಸುಧಾರಿಸಲಾಗಿದೆ. ಇದರ ಪ್ರಕಾರ, ಯಾವುದೇ ವ್ಯಕ್ತಿ ಜನನದ ವೇಳೆಯಲ್ಲಿ ಅವರು ಧರಿಸಿದ ಲಿಂಗವನ್ನು ಆಧರಿಸಿ 'ಪುರುಷ' (Man) ಅಥವಾ 'ಮಹಿಳೆ' (Woman) ಎಂದು ವ್ಯಾಖ್ಯಾನಿಸುವ ಬದಲು ಜೈವಿಕ ಲಿಂಗ ಲಕ್ಷಣವನ್ನು ಆಧರಿಸಿ ಅರ್ಥ ವ್ಯಾಖ್ಯಾನವನ್ನು ವಿಸ್ತರಿಸಲಾಗಿದೆ.

ನಿಘಂಟಿನ ಅರ್ಥ ವಿವರಣೆಯ ಪ್ರಕಾರ, ಜನನದ ಸಂದರ್ಭದಲ್ಲಿ ವಿಭಿನ್ನ ಲಿಂಗದಲ್ಲಿ ಜನಿಸಿದ ವ್ಯಕ್ತಿ ವಯಸ್ಕನಾದಾಗ ತನ್ನನ್ನು ತಾನು ಪುರುಷ ಎಂದು ಕರೆದುಕೊಳ್ಳುವುದು ಹಾಗೂ ಯಾವುದೇ ವ್ಯಕ್ತಿ ಜನನದ ಸಂದರ್ಭದಲ್ಲಿ ವಿಭಿನ್ನ ಲಿಂಗದಲ್ಲಿ ಧರಿಸಿ ವಯಸ್ಕನಾದಾಗ ತನ್ನನ್ನು ತಾನು ಮಹಿಳೆ ಎಂದು ಕರೆದುಕೊಳ್ಳುವುದು ಕ್ರಮವಾಗಿ 'ಪುರುಷ' ಮತ್ತು 'ಮಹಿಳೆ' ಪದದ ವ್ಯಾಖ್ಯಾನವಾಗಿದೆ. ಈ ವ್ಯಾಖ್ಯಾನದೊಂದಿಗೆ ನಿಘಂಟಿನಲ್ಲಿ ಎರಡು ಉದಾಹರಣೆಯನ್ನೂ ನೀಡಲಾಗಿದೆ: 'ಪುರುಷ' ಪದದ ಅರ್ಥವು "ಮಾರ್ಕ್ ಓರ್ವ ಲಿಂಗ ಪರಿವರ್ತನೆಗೊಂಡ 'ಪುರುಷ'ನಾಗಿದ್ದು, (ಜನನದ ಸಂದರ್ಭದಲ್ಲಿ ಮಹಿಳೆಯಾಗಿ ಜನಿಸಿದ ವ್ಯಕ್ತಿ), ಆತನಿಗೆ ಲಿಂಗ ಪರಿವರ್ತನೆ ಶಸ್ತ್ರಚಿಕಿತ್ಸೆ ನೆರವೇರಿಸುವುದಕ್ಕೂ ಮುನ್ನ ಆತನ ವೈದ್ಯರು ಪುರುಷನಾಗಿ ಜೀವಿಸುವಂತೆ ಉತ್ತೇಜಿಸಿದರು" ಎಂದಾಗಿದೆ.

'ಮಹಿಳೆ' ಪದಕ್ಕೆ ಈ ಉದಾಹರಣೆ ನೀಡಲಾಗಿದೆ. "ಆಕೆ ಮೊದಲ ಲಿಂಗಾಂತರಿ ಮಹಿಳೆಯಾಗಿದ್ದು, ಸರ್ಕಾರಿ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮೊದಲ ಲಿಂಗಾಂತರಿ ಮಹಿಳೆಯಾಗಿದ್ದಾಳೆ. ಮೇರಿ ಜನನದ ಸಂದರ್ಭದಲ್ಲಿ ಪುರುಷ ಲಿಂಗದಲ್ಲಿ ಜನಿಸಿದ್ದಳು" ಎಂದು ಹೇಳಲಾಗಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಕೇಂಬ್ರಿಡ್ಜ್ ನಿಘಂಟು ವಕ್ತಾರ, "ನಮ್ಮ ಸಂಪಾದಕರು ಮಹಿಳೆ ಪದಕ್ಕೆ ಈ ಅರ್ಥವನ್ನು ಅಕ್ಟೋಬರ್ನಲ್ಲಿ ಸೇರ್ಪಡೆಗೊಳಿಸಿದರು. ಅವರು ಮಹಿಳೆ ಪದ ಬಳಕೆಯ ಮಾದರಿಗಳನ್ನು ಎಚ್ಚರಿಕೆಯಿಂದ ಗಮನಿಸಿದರು ಮತ್ತು ಭಾಷೆಯೊಂದನ್ನು ಹೇಗೆ ಬಳಸಬೇಕು ಎಂಬುದಕ್ಕೆ ನೇರವಾಗಿ ಈ ವ್ಯಾಖ್ಯಾನವನ್ನು ಇಂಗ್ಲಿಷ್ ಅಭ್ಯಾಸಿಗಳು ತಿಳಿದಿರಲೇಬೇಕು ಎಂಬ ನಿರ್ಣಯಕ್ಕೆ ಬಂದರು. ಮಹಿಳೆ ಪದಕ್ಕೆ ಮೊದಲು ನೀಡಲಾಗಿದ್ದ ವ್ಯಾಖ್ಯಾನವು ಹಾಗೇ ಉಳಿದಿದ್ದು, ಅದು 'ವಯಸ್ಕ ಮನುಷ್ಯ ಮಹಿಳೆ' ಎಂದೇ ಮುಂದುವರಿಯಲಿದೆ ಎಂದು 'ಟೆಲಿಗ್ರಾಫ್' ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

ಇದಕ್ಕೂ ಮುನ್ನ ಜುಲೈನಲ್ಲಿ ಸಾಮಾಜಿಕ ಜಾಲತಾಣಿಗ ಮೆರಿಯಮ್ 'ಮಹಿಳೆ' ಪದಕ್ಕೆ ಪೂರಕ ವ್ಯಾಖ್ಯಾನ ಒದಗಿಸಿದ್ದರು. ಅವರ ಪ್ರಕಾರ, 'ಪುರುಷ ಲಿಂಗಕ್ಕೆ ವಿರುದ್ಧವಾದ ಲಿಂಗ ಗುರುತು ಹೊಂದಿರುವವಳು ಮಹಿಳೆ' ಎಂದಾಗಿತ್ತು. ಈ ಬದಲಾವಣೆಯ ಬೆನ್ನಿಗೇ ಹಲವಾರು ಮಂದಿ ಕೇಂಬ್ರಿಡ್ಜ್ ನಿಘಂಟಿನ ನಡೆಯನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಟೀಕಿಸಿದ್ದಾರೆ. "ಈ ಪದದ ಅರ್ಥವನ್ನು ತಿಳಿಯಲು ಪ್ರಯತ್ನಿಸಿ ಮತ್ತು ಅವರು ಮಹಿಳೆಯನ್ನು ಅಳಿಸಿ ಹಾಕಲು ಯತ್ನಿಸುತ್ತಿಲ್ಲ ಎಂಬುದನ್ನು ನನಗೆ ಮನವರಿಕೆ ಮಾಡಿಕೊಡಿ. ಕೇಂಬ್ರಿಡ್ಜ್ ನಿಘಂಟು ಮಹಿಳೆ ಪದದ ವ್ಯಾಖ್ಯಾನವನ್ನು ಬದಲಿಸಿದೆ. ಇದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಮಹಿಳೆ=ವಯಸ್ಕ ಮನುಷ್ಯ ಮಹಿಳೆ. ಯಾರಾದರೂ ಮಹಿಳೆಯೆಂದು ಗುರುತಿಸಿಕೊಳ್ಳುವುದಲ್ಲ" ಎಂದು ಓರ್ವ ಸಾಮಾಜಿಕ ಮಾಧ್ಯಮ ಬಳಕೆದಾರರು ಟ್ವೀಟ್ ಮಾಡಿದ್ದಾರೆ. "ಜನಪ್ರಿಯವಲ್ಲದ ಸಿದ್ಧಾಂತಕ್ಕೆ ಹೊಂದುವಂತೆ ನಿಘಂಟು ವ್ಯಾಖ್ಯಾನಗಳನ್ನು ಬದಲಿಸಲು ಹೊರಡುವುದು ಹುಚ್ಚುತನವಾಗಿದೆ. ಈ ರೀತಿ ಮಹಿಳೆಯರನ್ನು ಅಳಿಸಿ ಹಾಕುವ ಕುರಿತು ಮಹಿಳೆಯರ ಬಳಿ ಕೇಳಲಾಗಿಲ್ಲ. ಹೀಗಿದ್ದೂ ಕೇಂಬ್ರಿಡ್ಜ್ ನಿಘಂಟು 'ಮಹಿಳೆ'ಯನ್ನು ಪುರುಷ ಎಂದು ವ್ಯಾಖ್ಯಾನಿಸುವ ಮೂಲಕ 'ಮಹಿಳೆ' ಪದವನ್ನು ಅಪರಾಧೀಕರಣಗೊಳಿಸಿದೆ" ಎಂದು ಮತ್ತೋರ್ವ ವ್ಯಕ್ತಿ ಕಿಡಿ ಕಾರಿದ್ದಾರೆ.

Similar News