×
Ad

ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದಲ್ಲಿ ತಜ್ಞ ವೈದ್ಯರ ಸಮಾವೇಶ

Update: 2022-12-16 19:03 IST
ಕೊಣಾಜೆ: ನಿಟ್ಟೆ ಪರಿಗಣಿತ ವಿಶ್ವವಿದ್ಯಾನಿಲಯದ ವತಿಯಿಂದ ಎರಡು ದಿನಗಳ ಕಾಲ ನಡೆಯಲಿರುವ ತಜ್ಞ ವೈದ್ಯರ ಸಮಾವೇಶವು ಗುರುವಾರ ನಿಟ್ಟೆಯ ಆವಿಷ್ಕಾರ ಸಭಾಂಗಣದಲ್ಲಿ ನಡೆಯಿತು. ನಿಟ್ಟೆ ವಿಶ್ವವಿದ್ಯಾಲಯದ ಉಪಕುಲಪತಿಗಳಾದ ಡಾ| ಸತೀಶ್ ಕುಮಾರ್ ಭಂಡಾರಿಯವರು ಸಮಾವೇಶವನ್ನು ಉಧ್ಘಾಟಿಸಿದರು. ಕೆ. ಎಸ್. ಹೆಗ್ಡೆ ವೈದ್ಯಕೀಯ ವಿದ್ಯಾಲಯದ ಡೀನ್ ಡಾ.ಪಿ. ಎಸ್. ಪ್ರಕಾಶ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಕರ್ನಾಟಕ ತಜ್ಞ ವೈದ್ಯರ ಸಂಘದ ಮುಖ್ಯಸ್ಥರಾದ ಡಾ. ಗೋವಿಂದ ಬಾಬು ಕೆ. ಇವರು ಡಾ.ಅಮರನಾಥ ಹೆಗ್ಡೆ ಸ್ಮಾರಕ ದತ್ತಿ ಉಪನ್ಯಾಸ ನೀಡಿದರು. ನಿಟ್ಟೆ ವಿಶ್ವವಿದ್ಯಾಲಯದ ಸಹಕುಲಾಧಿಪತಿಗಳಾದ ಡಾ. ಶಾಂತಾರಾಮ ಶೆಟ್ಟಿ ಇವರು ಡಾ. ಕೆ. ಪಿ. ಗಣೇಶನ್ ಸ್ಮಾರಕ ದತ್ತಿ ಉಪನ್ಯಾಸ ನೀಡಿದರು. ಡಾ.ಜೆ.ಪಿ. ಆಳ್ವ, ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜಿನ ನಿಕಟ ಪೂರ್ವ ಡೀನ್ ಇವರು ಡಾ. ವಿ.ವಿ.ಮೋದಿ ಸ್ಮಾರಕ ದತ್ತಿ ಉಪನ್ಯಾಸವನ್ನು ನೀಡಿದರು. ತಜ್ಞ ವೈದ್ಯರ ಸಂಘದ ಮಂಗಳೂರು ಘಟಕದ ಪದಾಧಿಕಾರಿಗಳು ಹಾಗೂ ಕೆ. ಎಸ್ . ಹೆಗ್ಡೆ ಮೆಡಿಕಲ್ ಅಕಾಡೆಮಿ (ಕ್ಷೇಮ) ವೈದ್ಯಕೀಯ ವಿಭಾಗದ ತಜ್ಞರು ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಕರ್ನಾಟಕ ಹಾಗೂ ಕೇರಳ ರಾಜ್ಯಗಳ ತಜ್ಞವೈದ್ಯರು ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳು ಇದರಲ್ಲಿ ಭಾಗವಹಿಸಿ ಪ್ರಭಂದಗಳನ್ನು ಮಂಡಿಸಿ ವಿಚಾರ ವಿನಿಮಯ ನಡೆಸಿದರು

Similar News