×
Ad

ಡಿ.18ರಿಂದ ಮತ್ಸ್ಯಗಂಧ ರೈಲು ವಿದ್ಯುತ್ ಚಾಲಿತ

Update: 2022-12-16 19:17 IST
ಉಡುಪಿ, ಡಿ.16: ಮಂಗಳೂರು ಸೆಂಟ್ರಲ್ ಹಾಗೂ ಮುಂಬೈ ಲೋಕಮಾನ್ಯ ತಿಲಕ್ ನಿಲ್ದಾಣದ ನಡುವೆ ಪ್ರತಿದಿನ ಓಡಾಟ ನಡೆಸುವ ಮತ್ಸ್ಯಗಂಧ ಎಕ್ಸ್‌ಪ್ರೆಸ್ ಡಿ.18ರಿಂದ ವಿದ್ಯುತ್ ಚಾಲಿತ ರೈಲಾಗಿ ಸಂಚರಿಸಲಿದೆ ಎಂದು ಕೊಂಕಣ ರೈಲ್ವೆ ಪ್ರಕಟಣೆ ತಿಳಿಸಿದೆ. ರೈಲು ನಂ.12620 ಮಂಗಳೂರು ಸೆಂಟ್ರಲ್-ಲೋಕಮಾನ್ಯ ತಿಲಕ್ ಮತ್ಸ್ಯಗಂಧ ದೈನಂದಿನ ಎಕ್ಸ್‌ಪ್ರೆಸ್ ಡಿ.18ರಿಂದ ಹಾಗೂ ರೈಲು ನಂ. 12619 ಲೋಕಮಾನ್ಯ ತಿಲಕ್-ಮಂಗಳೂರು ಸೆಂಟ್ರಲ್ ಮತ್ಸ್ಯಗಂಧ ದೈನಂದಿನ ಎಕ್ಸ್‌ಪ್ರೆಸ್ ಡಿ.19ರಿಂದ ವಿದ್ಯುತ್ ಚಾಲಿತ ರೈಲಾಗಿ ಸಂಚರಿಸಲಿವೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಅದೇ ರೀತಿ ತಿರುವನಂತಪುರ ಸೆಂಟ್ರಲ್ ಹಾಗೂ ಎಚ್.ನಿಝಾಮುದ್ದೀನ್ ನಡುವೆ ಸಂಚರಿಸುವ ಎರಡು ಸಾಪ್ತಾಹಿಕ ರೈಲುಗಳು ಡಿ.17 ಹಾಗೂ 21ರಿಂದ ಮತ್ತು ಕೊಚ್ಚುವೇಲಿ ಹಾಗೂ ಯೋಗ್ ನಗರಿ ಋಷಿಕೇಶ್ ಸಾಪ್ತಾಹಿಕ ಎಕ್ಸ್‌ಪ್ರೆಸ್ ರೈಲು ಡಿ.23ರಿಂದ ವಿದ್ಯುತ್ ಚಾಲಿತ ರೈಲಾಗಿ ಸಂಚರಿಸಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Similar News